ಮಣಿಪುರದ ಇಂಫಾಲ್ ಪಶ್ಚಿಮ ಜಿಲ್ಲೆಯಲ್ಲಿ 41 ವರ್ಷದ ಭಾರತೀಯ ಸೇನಾ ಯೋಧನನ್ನು ಅಪಹರಿಸಿ ನಂತರ ಕೊಂದು ಬಿಡಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ರಕ್ಷಣಾ ಸಚಿವಾಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿ (PRO) ಪ್ರಕಾರ, ಸಿಪಾಯಿ ಸೆರ್ಟೊ ತಂಗ್‌ಥಾಂಗ್ ಕೋಮ್ (41) ಅವರನ್ನು ಮೂವರು ಅಪರಿಚಿತ ದುಷ್ಕರ್ಮಿಗಳು ಅಪಹರಿಸಿ ನಂತರ ಕೊಂದಿದ್ದಾರೆ. ರಜೆಯಲ್ಲಿ ಮನೆಗೆ ಬಂದಿದ್ದ ಸೈನಿಕ ಸೆರ್ಟೊ ಥಂಗ್ಥಾಂಗ್ ಕೋಮ್ ಅವರನ್ನು ಇಂಫಾಲ್ ಪಶ್ಚಿಮ ಜಿಲ್ಲೆಯ ಅವರ
ಸೆಪ್ಟಂಬರ್ 16, 2023 ರಂದು ಬೆಳಿಗ್ಗೆ 10:00 ಗಂಟೆಗೆ ಸಿಪಾಯಿ ಸೆರ್ಟೊ ಅವರನ್ನು ಅವರ ಇಂಫಾಲ್ ವೆಸ್ಟ್‌ನ ಹ್ಯಾಪಿ ವ್ಯಾಲಿಯಲ್ಲಿರುವ ತರುಂಗ್‌ನಲ್ಲಿ ಮನೆಯಿಂದ ಅಪಹರಿಸಲಾಯಿತು ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಅಪರಾಧದ ಏಕೈಕ ಪ್ರತ್ಯಕ್ಷದರ್ಶಿಯಾಗಿರುವ ಅವರ 10 ವರ್ಷದ ಮಗನ ಹೇಳಿಕೆಯ ಪ್ರಕಾರ, ಮೂವರು ದುಷ್ಕರ್ಮಿಗಳು ಮನೆಗೆ ಪ್ರವೇಶಿಸಿದ್ದಾರೆ ಎಂದು ಹೇಳಿದರು. ತಂದೆ ಮತ್ತು ಮಗ ಮನೆಯ ಮುಂದೆ ಕೆಲಸ ಮಾಡುತ್ತಿದ್ದರು ಮತ್ತು ಅವನ ತಂದೆಯ ತಲೆಯ ಮೇಲೆ ಪಿಸ್ತೂಲ್ ಇಟ್ಟು ಬಿಳಿ ಬಣ್ಣದ ವಾಹನಕ್ಕೆ ಬಲವಂತವಾಗಿ ಹತ್ತಿಸಿದರು.
ಇಂಫಾಲ್ ಪೂರ್ವದ ಮೊಂಗ್ಜಾಮ್‌ನ ಪೂರ್ವದಲ್ಲಿರುವ ಖುನಿಂಗ್ಥೆಕ್ ಗ್ರಾಮದಲ್ಲಿ ಅವರ ಶವ ಪತ್ತೆಯಾಗಿದೆ. ಸೈನಿಕನ ತಲೆಯ ಮೇಲೆ ಒಂದು ಗುಂಡು ಇತ್ತು ಎಂದು ಅವರ ಸಹೋದರ ಮತ್ತು ಸೋದರ ಮಾವ ದೃಢಪಡಿಸಿದರು. ಸೈನಿಕ ಕೋಮ್ ಅವರು ಪತ್ನಿ, ಮಗಳು ಮತ್ತು ಪುತ್ರನನ್ನು ಅಗಲಿದ್ದಾರೆ.
ಸೈನಿಕನ ಹತ್ಯೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ ಮತ್ತು ಈ ಕಷ್ಟದ ಸಮಯದಲ್ಲಿ ಅವರ ಕುಟುಂಬದೊಂದಿಗೆ ನಿಲ್ಲುತ್ತೇವೆ ಎಂದು ಸೇನೆ ಹೇಳಿಕೆಯಲ್ಲಿ ತಿಳಿಸಿದೆ. ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ರೀತಿಯಲ್ಲೂ ಸಹಾಯ ಮಾಡಲು ಸೇನೆಯು ತಂಡವನ್ನು ರವಾನಿಸಿದೆ ಎಂದು ಅದು ಹೇಳಿದೆ.
👇 👇 👇👇 👇 👇👇 👇 👇👇 👇 👇👇 👇 👇👇 👇 👇