ವಿಶೇಷ ಅಧಿವೇಶನ: ಇಂದೇನು?
* ಎಲ್ಲಾ ಪಕ್ಷಗಳ ಸಂಸದರಿಂದ ಹಳೆ ಸಂಸತ್‌ಗೆ ಅಂತಿಮ ಭೇಟಿ
* ಹಳೆ ಸಂಸತ್ ಮುಂಭಾಗದಲ್ಲಿ ಸಂಸದರ ಫೋಟೋಶೂಟ್
* ಹೊಸ ಸಂಸತ್ ಕಟ್ಟಡಕ್ಕೆ ತೆರಳಿರುವ ಸಂಸದರು
* ಹೊಸ ಸಂಸತ್ ಕಟ್ಟಡದಲ್ಲಿ ಅಧಿವೇಶನ ಆರಂಭ
* ಪರಿಕರಗಳನ್ನು ಬಳಸಿಕೊಳ್ಳುವ ಬಗ್ಗೆ ಬೀಫಿಂಗ್
* ಹಲವು ಮಸೂದೆಗಳ ಬಗ್ಗೆ ಚರ್ಚೆ * ಮಸೂದೆಗಳಿಗೆ ಅನುಮೋದನೆ
> ಇದೆಲ್ಲದರ ಜೊತೆ ವಿಪಕ್ಷಗಳ ಸಭೆ ಹಾಗೂ ಆಡಳಿತ ಪಕ್ಷದ ಸಭೆ ನಡೆಯಲಿದೆ.
ಹಳೆ ಸಂಸತ್ ಭವನದೆದುರು ಫೋಟೋಶೂಟ್
ಹಳೆಯ ಸಂಸತ್ ಭವನಕ್ಕೆ ಇಂದು ವಿದಾಯ ಹೇಳಲಿರುವ ಹಿನ್ನೆಲೆಯಲ್ಲಿ ಕಟ್ಟಡದ ಎದುರು ಫೋಟೋಶೂಟ್ ನಡೆಯಲಿದೆ. ಈ ವೇಳೆ ಎಲ್ಲಾ ಪಕ್ಷಗಳ ಸಂಸದರೂ ಫೋಟೋಗೆ ಪೋಸ್ ನೀಡಲಿದ್ದಾರೆ. ಬಳಿಕ ಹಳೆಯ ಸಂಸತ್ ಕಟ್ಟಡದಲ್ಲಿರುವ ಸಂವಿಧಾನದ ಪ್ರತಿಯನ್ನು ಪ್ರಧಾನಿ ಮೋದಿ ಕಾಲ್ನಡಿಗೆಯಲ್ಲಿ ಹೊಸ ಸಂಸತ್ ಭವನಕ್ಕೆ ತರಲಿದ್ದಾರೆ. ಈ ವೇಳೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಸಂಸದೆ ಮೇನಕಾ ಗಾಂಧಿ ಅವರು ನೂತನ ಭವನದ ಕೇಂದ್ರ ಸಭಾಂಗಣದಲ್ಲಿ ವಿಶೇಷ ಭಾಷಣ ಮಾಡಲಿದ್ದಾರೆ.
ಹಳೆಯ ಸಂಸತ್ ಕಟ್ಟಡ ಏನಾಗಲಿದೆ?
ಇಂದಿನಿಂದ ಸಂಸತ್ತಿನ ವಿಶೇಷ ಅಧಿವೇಶನಗಳು ಹೊಸ ಕಟ್ಟಡದಲ್ಲಿ ನಡೆಯಲಿದ್ದು, ಹಳೆಯ ಸಂಸತ್ ಸಂಸತ್ತಿನ ಕಾರ್ಯಚಟುವಟಿಕೆಗಳಿಗೆ ಬಳಕೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬ್ರಿಟಿಷ್ ವಾಸ್ತುಶಿಲ್ಪಿಗಳು ವಿನ್ಯಾಸಗೊಳಿಸಿದ ಈ ಕಟ್ಟಡವು ಬ್ರಿಟಿಷ್ ಸರ್ಕಾರದ ಲೆಜಿಸ್ಟ್ರೇಟಿವ್ ಕೌನ್ಸಿಲ್ ಆಗಿತ್ತು. ಸ್ವಾತಂತ್ರ್ಯದ ನಂತರ, ಈ ಕೌನ್ಸಿಲ್‌ಹೌಸ್‌ನ್ನು ಸಂಸತ್ತಾಗಿ ಪರಿವರ್ತಿಸಲಾಯಿತು. ಈ ಕಟ್ಟಡ ನಿರ್ಮಿಸಲು ಆರು ವರ್ಷಗಳು (1921-1927) ತೆಗೆದುಕೊಂಡಿತು. ಇದಕ್ಕಾಗಿ 83 ಲಕ್ಷ ರೂ. ಖರ್ಚಾಗಿತ್ತು