ಏಷ್ಯನ್ ಗೇಮ್ಸ್ನಲ್ಲಿ ಭಾರತಕ್ಕಿಂದು ‘ಗೋಲ್ಡನ್ ಡೇ’.
ಸ್ಮಾಷ್ ಪುರುಷರ ಟೀಂ ಈವೆಂಟ್‌ನಲ್ಲಿ ಭಾರತ ಚಿನ್ನದ ಪದಕ ಗೆದ್ದುಕೊಂಡಿದೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 2-1 ರಿಂದ ಮಣ್ಣು ಮುಕ್ಕಿಸಿದ ಭಾರತದ ತಂಡ ಸ್ವರ್ಣ ಪದಕವನ್ನು ಬೇಟೆಯಾಡಿತು. ಮೊದಲ ಮ್ಯಾಚ್‌ನಲ್ಲಿ ಭಾರತದ ಮಹೇಶ್ ಸೋತರೂ ಎದೆಗುಂದದ ಸೌರವ್ ಮತ್ತು ಅಭಯ್ ನಂತರದ ಎರಡೂ ಪಂದ್ಯಗಳನ್ನು ಗೆದ್ದುಕೊಂಡರು. ಇದಕ್ಕೂ ಮುನ್ನ ಟೆನಿಸ್ ಮಿಶ್ರ ಡಬಲ್ಸ್‌ನಲ್ಲೂ ಬೋಪಣ್ಣ-ರುತುಜಾ ಜೋಡಿ ಚಿನ್ನದ ಪದಕ ಜಯಿಸಿತ್ತು