ಅ ೨೮: ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂಬ ಇನ್‌ಫೋಸಿಸ್ ಸಂಸ್ಥಾಪಕ ಚೇರ್‌ಮನ್ ಎನ್ ಆರ್ ನಾರಾಯಣ ಮೂರ್ತಿ ಅವರ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೊಳಗಾಗಿದೆ.ಇತರೆ ಮುಂದುವರಿದ ದೇಶಗಳಿಗೆ ಹೋಲಿಸಿದರೆ ಭಾರತದ ಉತ್ಪಾದಕತೆ ಬಹಳ ಕಡಿಮೆ.
3ಒನ್4 ಕ್ಯಾಪಿಟಲ್‌ನ ದ ರೆಕಾರ್ಡ್ ಎಂಬ ಪಾಡ್‌ಕಾಸ್ಟ್‌ನಲ್ಲಿ ಸಿಎಫ್‌ಒ ಮೋಹನದಾಸ ಪೈ ಅವರ ಜತೆಗಿನ ಮಾತುಕತೆಯಲ್ಲಿ ನಾರಾಯಣ ಮೂರ್ತಿ ಇದನ್ನು ಹೇಳಿದರು.
ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಹೇಳಿಕೆ
ಚೀನಾ ಮತ್ತು ಜಪಾನ್‌ನಂತಹ ವೇಗವಾಗಿ ಬೆಳೆಯುತ್ತಿರುವ ದೇಶಗಳೊಂದಿಗೆ ನಾವು ಸ್ಪರ್ಧಿಸಲು ಬಯಸುವುದಾದರೆ, ನಮ್ಮ ಕೆಲಸದ ಉತ್ಪಾದಕತೆಯನ್ನು ಹೆಚ್ಚಿಸಬೇಕಾಗಿದೆ. ಈಗ, ಭಾರತದ ಕೆಲಸದ ಉತ್ಪಾದಕತೆ ತುಂಬಾ ಕಡಿಮೆ ಇದೆ. ಸರ್ಕಾರವು ನಿರ್ಧಾರ ತೆಗೆದುಕೊಳ್ಳುವುದಕ್ಕೆ ತೆಗೆದುಕೊಳ್ಳುವ ಸಮಯವನ್ನು ಕಡಿಮೆ ಮಾಡಬೇಕು. ಅಧಿಕಾರಶಾಹಿಯಲ್ಲಿ ಭ್ರಷ್ಟಾಚಾರವನ್ನು ನಿಗ್ರಹಿಸಬೇಕು. ನಮ್ಮ ಯುವಜನರು ವಾರಕ್ಕೆ ಕನಿಷ್ಠ 70 ಗಂಟೆ ಕೆಲಸ ಮಾಡಬೇಕು ಎಂದು ನಾರಾಯಣ ಮೂರ್ತಿ ಹೇಳಿದರು.
“ಎರಡನೆಯ ಮಹಾಯುದ್ಧದ ನಂತರ, ಜರ್ಮನಿ ಮತ್ತು ಜಪಾನ್‌ನ ಜನ ತಮ್ಮ ದೇಶಕ್ಕಾಗಿ ಹೆಚ್ಚುವರಿ ಗಂಟೆಗಳ ಕಾಲ ಕೆಲಸ ಮಾಡಿದರು. ಭಾರತದಲ್ಲಿನ ಯುವಕರು ಸಹ ದೇಶವನ್ನು ಹೊಂದಿದ್ದಾರೆ. ಅವರೂ ನಮ್ಮ ಆರ್ಥಿಕತೆಯ ಸಲುವಾಗಿ ಶ್ರಮಿಸುತ್ತಾರೆ” ಎಂದು ನಾರಾಯಣ ಮೂರ್ತಿ