ನ ೦೨:ಇಬ್ಬರು ರಹಸ್ಯವಾಗಿ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಈಗಾಗಲೇ ಹಲವು ಬಾರಿ ವರದಿಯಾಗಿದೆ. ಯುವ ಆರಂಭಿಕ ಟೀಮ್ ಇಂಡಿಯಾ ಆಟಗಾರ ಶುಭ್ಮನ್ ಗಿಲ್
ಮುಂಬೈನಲ್ಲಿ ನಡೆದ ಮುಕೇಶ್ ಅಂಬಾನಿ ಒಡೆತನದ ಜಿಯೋ ವರ್ಲ್ಡ್ ಪ್ಲಾಜಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಈ ಜೋಡಿ ಭಾಗವಹಿಸಿತ್ತು. ಬಾಲಿವುಡ್ ನಟರು ಸೇರಿದಂತೆ ಉದ್ಯಮಿಗಳು, ಸೆಲೆಬ್ರೆಟಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅದರಂತೆ ಸಾರಾ ಮತ್ತು ಶುಭ್ಮನ್ ಸಹ ಭಾಗವಹಿಸಿದ್ದರು. ಈ ವಿಡಿಯೋ ಸಖತ್ ವೈರಲ್ ಆಗಿದೆ.
ಸಾರಾ ಮತ್ತು ಗಿಲ್ ಒಟ್ಟಿಗೆ ನಡೆದುಕೊಂಡು ಬರುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಆದರೆ ಕ್ಯಾಮೆರಾಗಳನ್ನು ಕಂಡ ಗಿಲ್ ಕದ್ದುಮುಚ್ಚಿ ಓಡಾಡುತ್ತಿದ್ದರು. ತನಗೇನು ತಿಳಿಯದಂತೆ ತಪ್ಪಿಸಿಕೊಳ್ಳಲು ಗಿಲ್ ಯತ್ನಿಸುತ್ತಿರುವುದು ವಿಡಿಯೋದಲ್ಲಿದೆ. ಹೇಗಾದರೂ ತಪ್ಪಿಸಿಕೊಳ್ಳಬೇಕೆಂಬ ಕಾರಣಕ್ಕೆ ಅತ್ತಿಂದತ್ತ ಓಡಾಡಿದ್ದಾರೆ. ಮೊಬೈಲ್ ಫೋನ್ ಹಿಡಿದು ನೋಡುತ್ತಿದ್ದವರಂತೆ ಮಾಡಿದ್ದಾರೆ.
ಕೊನೆಗೂ ಈ ಇಬ್ಬರ ಪ್ರೇಮಾಂಕುರ ಇದೆ ಎಂಬುದನ್ನು ಈ ಘಟನೆ ಸಾಕ್ಷಿ ಸಮೇತ ನೀಡಿದೆ. ಹಲವು ವರ್ಷಗಳ ಕಾಲ ದೀರ್ಘ ಕಾಲದಿಂದ ಡೇಟಿಂಗ್ ನಡೆಸುತ್ತಾರೆ ಎಂಬ ಸುದ್ದಿ ಮಾಧ್ಯಮಗಳಿಂದ ಸುದ್ದಿ ಹರಿದಾಡುತ್ತಿದೆ. ಆದರೆ ಈ ಸೆಲೆಬ್ರೆಟಿಗಳು ಈ ಬಗ್ಗೆ ಅಧಿಕೃತಗೊಳಿಸಿಲ್ಲ. ಇದಕ್ಕೆ ಅಧಿಕೃತ ಮುದ್ರೆಯೊಂದೆ ಬೀಳುವುದೊಂದು ಬಾಕಿ ಉಳಿದಿದೆ. ಗಿಲ್ ಕಪ್ಪ ಬಣ್ಣದ ಜಾಕೆಟ್ ಧರಿಸಿದ್ದರೆ, ಸಾರಾ ಕೆಂಪು ಬಣ್ಣದ ಉಡುಪಿನಲ್ಲಿ ಮಿಂಚಿದ್ದಾರೆ.
ಬಾಂಗ್ಲಾ ಪಂದ್ಯಕ್ಕೆ ಹಾಜರಿದ್ದ ಸಾರಾ
ಅಕ್ಟೋಬರ್ 19ರಂದು ಪುಣೆಯ ಎಂಸಿಎ ಮೈದಾನದಲ್ಲಿ ನಡೆದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯಕ್ಕೆ ಸಾರಾ ತೆಂಡೂಲ್ಕರ್ ಹಾಜರಿದ್ದರು. ಈ ಪಂದ್ಯದಲ್ಲಿ ಗಿಲ್ ಅರ್ಧಶತಕ ಸಿಡಿಸಿದರು. ಗಿಲ್ ಬೌಂಡರಿ ಸಿಡಿಸಿದಾಗೆಲ್ಲಾ ಸಾರಾ ಚಪ್ಪಾಳೆ ತಟ್ಟುವ ಮೂಲಕ ಗಿಲ್ ಅವರನ್ನು ಹುರಿದುಂಬಿಸಿದ್ದರು. ಈ ಕುರಿತ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದವು.