Tue. Jan 14th, 2025

ಶೃಂಗಸಭೆ ನವೆಂಬರ್ 29 ರಿಂದ ಡಿಸೆಂಬರ್ 1ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ:ಸಚಿವ ಪ್ರಿಯಾಂಕ್ ಖರ್ಗೆ

ಶೃಂಗಸಭೆ ನವೆಂಬರ್ 29 ರಿಂದ ಡಿಸೆಂಬರ್ 1ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ:ಸಚಿವ ಪ್ರಿಯಾಂಕ್ ಖರ್ಗೆ

 

ನ ೨೭:  26ನೇ ಆವೃತ್ತಿಯ ಬೆಂಗಳೂರು ಟೆಕ್ ಶೃಂಗಸಭೆ ನವೆಂಬರ್ 29 ರಿಂದ ಡಿಸೆಂಬರ್ 1ರವರೆಗೆ ಬೆಂಗಳೂರಿ

ನ ಅರಮನೆ ಮೈದಾನದಲ್ಲಿ ನಡೆಯಲಿದೆ ಎಂದು ಐಟಿ- ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು. 

ಶನಿವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ಒಟ್ಟು 75 ಸಂವಾದಗಳು ನಡೆಯಲಿದ್ದು, 350 ಸ್ಟಾರ್ಟ್ಅಪ್ ಕುರಿತು ಪರಿಚಯ, 600 ಪ್ರದರ್ಶಕರು, 20 ಸಾವಿರ ಉದ್ಯಮಿಗಳು ಭಾಗವಹಿಸಲಿದ್ದು, ಅಂದು ಶೃಂಗಸಭೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಈ ಬಾರಿ 33 ದೇಶಗಳ ಪೈಕಿ 17 ದೇಶಗಳು ಸಂವಾದದಲ್ಲಿ ಪಾಲ್ಗೊಳ್ಳಲಿವೆ. ಇದರಿಂದ ನವೋದ್ಯಮಗಳಿಗೆ ಸಾಕಷ್ಟು ಸಹಾಯ ಹಾಗೂ ಅಮೆರಿಕದವರಿಗೂ ಇಲ್ಲಿ ಬಂಡವಾಳ ಹೂಡಿಕೆಗೆ ಅನುಕೂಲವಾಗಲಿದೆ ಎಂದ ಅವರು, ನಾವು ವಿಶ್ವದ ನಾಲ್ಕನೇ ಅತಿ ದೊಡ್ಡ ತಂತ್ರಜ್ಞಾನ ಕ್ಲಸ್ಟರ್ ಆಗಿದ್ದೇವೆ. ಮುಂದಿನ ಮೂರು ವರ್ಷಗಳವರೆಗೆ ಒಂದೇ ಘೋಷವಾಕ್ಯದಡಿ ವಿವಿಧ ಕಾರ್ಯಕ್ರಮ ಆಯೋಜಿಸಲು ಚಿಂತನೆ ನಡೆಸಲಾಗಿದೆ ಎಂದರು.

ನಾಲ್ಕುದಿನಗಳ ಈ ಶೃಂಗಸಭೆಯಲ್ಲಿ ವೈವಿದ್ಯಮ ಮತ್ತು ಉತ್ಕೃಷ್ಟ ಕಾರ್ಯಕ್ರಮಗಳು ಇರಲಿದ್ದು, ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಸಂವಾದಗಳು, ಡೀಪ್ ಟೆಕ್, ಸ್ಟಾರ್ಟ್-ಅಪ್‌ಗಳು ಮತ್ತು ಬಯೋಟೆಕ್, ಅಂತರಾಷ್ಟ್ರೀಯ ಪ್ರದರ್ಶನ, ಜಾಗತಿಕ ಆವಿಷ್ಕಾರ  ಮೈತ್ರಿ, ಭಾರತ-ಅಮೆರಿಕ ಟೆಕ್ ಕಾನ್ಕ್ಲೇವ್, ಆರ್ ಅಂಡ್ ಡಿ-ಲ್ಯಾಬ್2-ಮಾರುಕಟ್ಟೆ, ಬಿ2ಬಿ ಸಭೆಗಳನ್ನು ಒಳಗೊಂಡಿರುತ್ತದೆ. ಎಸ್.ಟಿ.ಪಿ.ಐ-ಐಟಿ ರಫ್ತು ಪ್ರಶಸ್ತಿಗಳು, ಸ್ಮಾರ್ಟ್ ಬಯೋ ಪ್ರಶಸ್ತಿಗಳು, ವಿಸಿ ಪ್ರಶಸ್ತಿಗಳು, ಎಟಿಎಫ್ ಪ್ರಶಸ್ತಿಗಳು, ಗ್ರಾಮೀಣ ಐಟಿ ರಸಪ್ರಶ್ನೆ, ಬಯೋ ಕ್ವಿಜಾಂಡ್ ಬಯೋ ಪೋಸ್ಟರ್‌ಗಳು ಸಹ ಶೃಂಗಸಭೆಯ ಭಾಗವಾಗಿರುತ್ತದೆ ಎಂದು ಅವರು ತಿಳಿಸಿದರು. 

 ಸಮ್ಮೇಳನದಲ್ಲಿ ಆಸ್ಟ್ರೇಲಿಯಾ, ಫಿನ್‌ಲ್ಯಾಂಡ್, ನೆದರ್‌ಲ್ಯಾಂಡ್ಸ್, ದಕ್ಷಿಣ ಕೊರಿಯಾ, ಡೆನ್ಮಾರ್ಕ್ ಸೇರಿದಂತೆ ಪಾಲುದಾರ ರಾಷ್ಟ್ರಗಳನ್ನು ಒಳಗೊಂಡ ಸುಮಾರು ರಾಷ್ಟ್ರಗಳಾದ ಸ್ವೀಡನ್, ಯುನೈಟೆಡ್ ಕಿಂಗ್‌ಡಮ್, ಫ್ರಾನ್ಸ್, ಇಸ್ರೇಲ್, ಪೋಲೆಂಡ್, ಆಸ್ಟ್ರಿಯಾ, ಜರ್ಮನಿ ಮತ್ತು ಎನ್.ಆರ್.ಡಬ್ಲ್ಯು, ಜಪಾನ್, ಸ್ವಿಟ್ಜರ್ಲೆಂಡ್, ಲಿಥುವೇನಿಯಾ ಮತ್ತು ಇಯು ಭಾಗವಹಿಸಲಿವೆ.

ಬರ್ಲಿನ್ ದೇಶದ ಸೆನೆಟರ್ ಫ್ರಾನ್ಜಿಸ್ಕಾ ಗಿಫ್ಫೆ, ಜರ್ಮನಿಯ ಡಸೆಲ್ಡಾರ್ಫ್‌ನ ಮೇಯರ್ ಡಾ. ಸ್ಟೀಫನ್ ಕೆಲ್ಲರ್, ಕೆನಡಾದ ಒಂಟಾರಿಯೊದ ಆರ್ಥಿಕತೆ, ಉದ್ಯೋಗ ಸೃಷ್ಟಿ ಮತ್ತು ವ್ಯಾಪಾರದ ಸಚಿವ ವಿಕ್ಟರ್ ಫೆಡೆಲಿ ಅವರು ಜಿಐಎ ಸೆಷನ್‌ಗಳಲ್ಲಿ ಮಾತನಾಡಲಿದ್ದಾರೆ. ಇನ್ನೂ ಹಲವು ದೇಶಗಳ ಸಚಿವರ ನೇತೃತ್ವದ ನಿಯೋಗಗಳು ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.     

Whatsapp Group Join
facebook Group Join
0

Related Post

Leave a Reply

Your email address will not be published. Required fields are marked *

error: Content is protected !!
Enable Notifications OK No thanks