Tue. Dec 24th, 2024

ಕನ್ನಡದ ಜನಪ್ರಿಯ ಹಿರಿಯ ನಟಿ ಲೀಲಾವತಿ, ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ: ಸಿಎಂ ಸಿದ್ದರಾಮಯ್ಯ|

ಕನ್ನಡದ ಜನಪ್ರಿಯ ಹಿರಿಯ ನಟಿ ಲೀಲಾವತಿ, ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ: ಸಿಎಂ ಸಿದ್ದರಾಮಯ್ಯ|

ಡಿ ೦೪: ಕನ್ನಡದ ಜನಪ್ರಿಯ ಹಿರಿಯ ನಟಿ ಲೀಲಾವತಿ

ವಯೋ ಸಹಜ ಕಾಯಿಲೆಗಳಿಂದ ಹಾಸಿಗೆ ಹಿಡಿದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದು  ಸೋಲದೇವನಹಳ್ಳಿಯಲ್ಲಿ ಇರುವ ಹಿರಿಯ ನಟಿ  ಲೀಲಾವತಿ ಅವರ ನಿವಾಸಕ್ಕೆ ಭೇಟಿ ನೀಡಿ, ಅವರ ಆರೋಗ್ಯವನ್ನು ವಿಚಾರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ, ಲೀಲಾವತಿ ಅವರ ಚಿಕಿತ್ಸೆಯ ಅಗತ್ಯ ಕಂಡುಬಂದು ಅವರನ್ನು ಆಸ್ಪತ್ರೆಗೆ ದಾಖಲಿಸಿದರೆ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದರು. 

ಲೀಲಾವತಿ ಅವರು ಆರೋಗ್ಯವಂತರಾಗಿದ್ದಾಗ ಜಮೀನು ವಿಚಾರವಾಗಿ ಸಮಸ್ಯೆ ಬಗೆಹರಿಸಿಕೊಳ್ಳಲು ಭೇಟಿಯಾಗುತ್ತಿದ್ದರು. ಈಗ ವಯೋಸಹಜವಾಗಿ ಕಾಯಿಲೆಗಳಿಂದ ಹಾಸಿಗೆ ಹಿಡಿದಿದ್ದಾರೆ. ಅವರು ಒಬ್ಬ ನೈಜ ಪ್ರತಿಭೆಯ ಕಲಾವಿದೆ. ಅವರ ಮಗ ವಿನೋದ್ ರಾಜ್ ಕೂಡ ತಾಯಿಯನ್ನು ಕಾಳಜಿಯಿಂದ ಆರೈಕೆ ಮಾಡುತ್ತಿದ್ದಾರೆ. ಸರ್ಕಾರದಿಂದ ಏನೇ ಸಹಾಯದ ಅಗತ್ಯವಿದ್ದರು ಅದನ್ನು ಒದಗಿಸಲಾಗುವುದು ಎಂದು ಹೇಳಿದರು. 

ಇದೇ ವೇಳೆ ಪ್ರತಿಕ್ರಿಯಿಸಿದ ವಿನೋದ್ ರಾಜ್, ಸಿದ್ದರಾಮಯ್ಯ ಅವರ ತಾಯಿ ಆರೋಗ್ಯದ ಬಗ್ಗೆ ಪ್ರೀತಿಯಿಂದ ವಿಚಾರಿಸಿದ್ದಾರೆ ಎಂದು ತಿಳಿಸಿದರು. ಅಲ್ಲದೇ, ಅರಣ್ಯಾಧಿಕಾರಿಯಿಂದ ತೊಂದರೆ ವಿಚಾರವನ್ನು ಸಿಎಂ ಗಮನಕ್ಕೆ ತಂದಿದ್ದೇನೆ.  ನಮ್ಮದು ಕಂದಾಯ ಭೂಮಿ ಎಂದು ಸೆಟಲ್ಮೆಂಟ್ ಆಗಿತ್ತು. ರೈತರನ್ನು ಅಲೆದಾಡಿಸೋದು ಆಗಬಾರದು. ಕೆಲವರು ರೈತರ ಜಾಗ ಭೂಕಬಳಿಕೆ ಮಾಡ್ತಿದ್ದಾರೆ. ಬಡವರನ್ನ ಕಣ್ಣೀರು ಹಾಕಿಸಬೇಡಿ ಎಂದುಕಣ್ಣೀರಿಟ್ಟರು.

Whatsapp Group Join
facebook Group Join

Related Post

Leave a Reply

Your email address will not be published. Required fields are marked *

error: Content is protected !!
Enable Notifications OK No thanks