ಡಿ ೦೮
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಚಿಕ್ಕಬ್ಯಾಲದಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಚಿಕ್ಕಬ್ಯಾಲದಕೆರೆ ಗ್ರಾಮದಲ್ಲಿ ಮಂಜುನಾಥ್ ಮತ್ತು ಐಶ್ವರ್ಯ ನಡುವೆ ವಿವಾಹ ನಿಶ್ಚಿಯವಾಗಿತ್ತು. ಅದರಂತೆ ಗ್ರಾಮದ ಭೈರವೇಶ್ವರ ಕಲ್ಯಾಣ ಮಂಟಪದಲ್ಲಿ ಮದುವೆಗೆ ಎಲ್ಲಾ ಸಿದ್ಧತೆ ಮಾಡಲಾಗಿತ್ತು. ಇನ್ನೇನು ವರ ಕೈಯಲ್ಲಿ ತಾಳಿ ಹಿಡಿದು ಕಟ್ಟಬೇಕು ಎನ್ನುವಷ್ಟರಲ್ಲೇ ವಧು ಕೈ ಅಡ್ಡ ಹಿಡಿದು ಮದುವೆ ಬೇಡ ಎಂದು ತಡೆದಿದ್ದಾಳೆ.
ಈ ವೇಳೆ ಸಂಬಂಧಿಕರು ಐಶ್ವರ್ಯಳನ್ನು ಮನವೊಲಿಸಲು ಪ್ರಯತ್ನಿಸಿದ್ದು, ಎಷ್ಟೇ ಹರಸಾಹಸ ಪಟ್ಟರೂ ಬಗ್ಗದ ಐಶ್ವರ್ಯ ಅವರು, ತಾಳಿ ಕಟ್ಟಿಸಿಕೊಳ್ಳಲು ನಿರಾಕರಿಸಿದ್ದಾರೆ.
ಬಳಿಕ ಯುವತಿ ನಡೆಗೆ ಯುವಕನ ಸಂಬಂಧಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಾಗ್ವಾದ ಉಂಟಾಗಿ ಕೊನೆಗೆ ಅಂತಿಮವಾಗಿ ಮದುವೆಯೇ ರದ್ದುಗೊಂಡಿದೆ.