ಡಿ ೨೦: CM ಸಿದ್ದರಾಮಯ್ಯ ಅವರ ಹೇಳಿಕೆ ಕುರಿತಾದ ನಕಲಿ ವಿಡಿಯೋ ಹಂಚಿಕೊಂಡ ವಿಚಾರವಾಗಿ ಬಿಆರ್‌ಎಸ್ ಮತ್ತು ರಾಜ್ಯ ಕಾಂಗ್ರೆಸ್ ನಾಯಕರ ನಡುವಿನ ಮಾತಿನ ಚಕಮಕಿ ಬುಧವಾರವೂ ಮುಂದುವರಿದಿದ್ದು, ಸಚಿವ ಪ್ರಿಯಾಂಕ್ ಖರ್ಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಬಿಆರ್‌ಎಸ್ ನಾಯಕ ಕೆಟಿ ರಾಮರಾವ್ ಕೂಡ ತಿರುಗೇಟು ನೀಡಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಅವರು ಕರ್ನಾಟಕ ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಅವರ ಭಾಷಣದ ಎಡಿಟ್ ಮಾಡಿದ ವಿಡಿಯೋ ಕ್ಲಿಪ್ ಅನ್ನು ಹಂಚಿಕೊಂಡಿದ್ದಕ್ಕಾಗಿ ಬಿಆರ್‌ಎಸ್ ಕಾರ್ಯಾಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೆಟಿಆರ್ ಬಿಜೆಪಿಯವರ ಸುಳ್ಳು ಮತ್ತು ಕುತಂತ್ರವನ್ನು ಗುತ್ತಿಗೆ ತೆಗೆದುಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.
Looks like @KTRBRS gaaru has taken BJP’s bait of lies and manipulation. I am sure such fake narratives will now be a daily affair since BRS & BJP are thick as thieves.
FYI, have a look at the brief & the complete video:https://t.co/TpDMINupYW
This is why Govt of Karnataka is… https://t.co/lJHHLgh26c
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) December 19, 2023
‘ಬಿಆರ್‌ಎಸ್ ಮತ್ತು ಬಿಜೆಪಿ ಸಂಬಂದ ಕಳ್ಳರಂತೆ ಒಬ್ಬರಿಗೊಬ್ಬರು ನಿಕಟವಾಗಿರುವುದರಿಂದ ಇಂತಹ ಸುಳ್ಳು ಸುದ್ದಿಗಳು ಈಗ ದೈನಂದಿನ ವ್ಯವಹಾರವಾಗುತ್ತಿವೆ ಎಂಬ ಬಗ್ಗೆ ನನಗೆ ಖಾತ್ರಿಯಿದೆ. ನಿಮ್ಮ ಮಾಹಿತಿಗಾಗಿ, ಸಂಕ್ಷಿಪ್ತ ಮತ್ತು ಸಂಪೂರ್ಣ ವಿಡಿಯೋವನ್ನು ನೋಡಿ’ ಎಂದು ಸಿದ್ದರಾಮಯ್ಯ ಅವರ ಪೂರ್ಣ ಭಾಷಣದ ಲಿಂಕ್ ಅನ್ನು ಪ್ರಿಯಾಂಕ್ ಖರ್ಗೆ ಹಂಚಿಕೊಂಡಿದ್ದಾರೆ.
‘ಇದಕ್ಕಾಗಿಯೇ ಕರ್ನಾಟಕ ಸರ್ಕಾರವು ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳ ವಿರುದ್ಧ ಹೋರಾಡಲು ಹೊಸ ಸೆಲ್‌ನೊಂದಿಗೆ ಬರುತ್ತಿದೆ’ ಎಂದು ಖರ್ಗೆ ಹೇಳಿದರು.
ಖರ್ಗೆ ಅವರ ವಾಗ್ದಾಳಿಗೆ ಕೌಂಟರ್ ನೀಡಿದ ಕೆಟಿಆರ್, ಕೆಲವು ಪತ್ರಿಕೆಗಳ ತುಣುಕುಗಳನ್ನು ಪೋಸ್ಟ್ ಮಾಡಿ, ‘ಕರ್ನಾಟಕದ ಯುವಕರಿಗೆ 2 ಲಕ್ಷ ಉದ್ಯೋಗ ಒದಗಿಸುವ ಬಗ್ಗೆ ನಿಮ್ಮ ನಾಯಕ ರಾಹುಲ್ ಗಾಂಧಿ ಹೇಳಿಕೆ ಮತ್ತು ರಾಜ್ಯದ ಭೊಕ್ಕಸ ಖಾಲಿಯಾಗಿರುವ ಬಗ್ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆಗಳು ಸಹ ನಕಲಿಯೇ’ ಎಂದು ಪ್ರಶ್ನಿಸಿದ್ದಾರೆ.
ನಾವು ತೆಲಂಗಾಣದಲ್ಲಿ ಮೂವರು ಸಂಸದರು ಸೇರಿದಂತೆ ಬಿಜೆಪಿಯ ಎಲ್ಲಾ ಪ್ರಮುಖರನ್ನು ಸೋಲಿಸಿದ್ದೇವೆ, ಕಾಂಗ್ರೆಸ್ ಪಕ್ಷವಲ್ಲ. ಸುನೀಲ್ ಮತ್ತು ತಂಡದ ಪ್ರಚಾರದಿಂದ ನೀವು ಛಿದ್ರಗೊಳ್ಳುವ ಮೊದಲು ಎಚ್ಚರಿಕೆಯಿಂದಿರಿ / ಸಿದ್ಧರಾಗಿರಿ’ ಎಂದು ಬಿಆರ್‌ಎಸ್ ನಾಯಕ ಹೇಳಿದ್ದಾರೆ.
ಮಂಗಳವಾರ, ಬಿಆರ್‌ಎಸ್ ನಾಯಕ ಕರ್ನಾಟಕ ಮುಖ್ಯಮಂತ್ರಿ ಭಾಷಣದ ಎಡಿಟ್ ಮಾಡಿದ ವಿಡಿಯೋವನ್ನು ಹಂಚಿಕೊಂಡ ನಂತರ ಕೆಟಿಆರ್ ಮತ್ತು ಸಿದ್ದರಾಮಯ್ಯ ಮಾತಿನ ಸಮರದಲ್ಲಿ ತೊಡಗಿದ್ದರು.