ಜ ೨೦:
ಪೊಲೀಸರ ಪ್ರಕಾರ, ಯೆನೆಪೊಯ ಕಾಲೇಜಿನಲ್ಲಿ(ಬಿಎಸ್‌ಸಿ ನರ್ಸಿಂಗ್) ಓದುತ್ತಿರುವ 20 ವರ್ಷದ ಯುವತಿ, ನಂತೂರಿನಲ್ಲಿರುವ ಜಿಎನ್‌ಎಂ ನರ್ಸಿಂಗ್ ಕಾಲೇಜಿನಲ್ಲಿ ಓದುತ್ತಿರುವ ತನ್ನ ಸ್ನೇಹಿತ 20 ವರ್ಷದ ಅಖಿಲ್ ಅವರೊಂದಿಗೆ ಬೆಳಗ್ಗೆ ಕದ್ರಿ ಪಾರ್ಕ್‌ಗೆ ಬಂದಿದ್ದರು.
ಈ ವೇಳೆ ಹಿಂದುತ್ವ ಸಂಘಟನೆಗಳಿಗೆ ಸೇರಿದವರು ಎನ್ನಲಾದ ಮೂವರು ಅವರ ಹೆಸರು ಮತ್ತು ಭೇಟಿಯ ಉದ್ದೇಶದ ಬಗ್ಗೆ ಪ್ರಶ್ನಿಸಿದ್ದಾರೆ. ಅಖಿಲ್ ಮುಸ್ಲಿಂ ಎಂದು ತಪ್ಪಾಗಿ ಭಾವಿಸಿ ಆತನ ಮೇಲೆ ಹಲ್ಲೆ ನಡೆಸಿ, ಅವಾಚ್ಯವಾಗಿ ನಿಂದಿಸಿದ್ದಾರೆ ಮತ್ತು ಅವರ ಫೋಟೋಗಳು, ವಿಡಿಯೋ ಮಾಡಿದ್ದಾರೆ.
ದೂರಿನ ಆಧಾರದ ಮೇಲೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, 18 ವರ್ಷ ವರ್ಷದ ನಿತಿನ್, 18 ವರ್ಷದ ಹರ್ಷ ಮತ್ತು 17 ವರ್ಷದ ಅಪ್ರಾಪ್ತ ಬಾಲಕ ಸೇರಿದಂತೆ ಮೂವರನ್ನೂ ಬಂಧಿಸಲಾಗಿದೆ.