ಹುಬ್ಬಳ್ಳಿ: ಗದಗದಲ್ಲಿ ಶುಕ್ರವಾರ ಮುಂಜಾನೆ ಒಂದೇಕುಟುಂಬದ ನಾಲ್ವರು ಕೊಲೆಯಾಗಿರುವ ಘಟನೆ ವರದಿಯಾಗಿದೆ .
ಗದಗ ಪಟ್ಟಣದ ದಸರಾ ಓಣಿಯಲ್ಲಿ ಇಂದು ಬೆಳಗಿನ ಜಾವ 2.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ . ಮೃತರನ್ನು ಕಾರ್ತಿಕ್ ಪ್ರಕಾಶ ಬಾಕಳೆ (27), ಪರಶುರಾಮ ಹಾದಿಮನಿ (55), ಲಕ್ಷ್ಮಿ ಹಾದಿಮನಿ (45), ಮತ್ತು ಆಕಾಂಕ್ಷಾ ಹಾದಿಮನಿ (16) ಎಂದು ಗುರುತಿಸಲಾಗಿದೆ.
ಬಲಿಯಾದವರಲ್ಲಿ ಬಿಜೆಪಿ ಮುಖಂಡ ಪ್ರಕಾಶ ಹಾದಿಮನಿ ಅವರ ಪುತ್ರ ಕಾರ್ತಿಕ್ ಸೇರಿದ್ದಾರೆ. ತಾಯಿ ಸುನಂದಾ ಗದಗ-ಬೆಟಗೇರಿ ನಗರಸಭೆ ಉಪಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಏಪ್ರಿಲ್ 17ಕ್ಕೆ ನಿಗದಿಯಾಗಿದ್ದ ಕಾರ್ತಿಕ್ ಮದುವೆಗೆ ಹಾದಿಮನಿ ಕುಟುಂಬದವರು ಆಗಮಿಸಿದ್ದರು ಎನ್ನಲಾಗಿದೆ. ಗದಗ ಪೊಲೀಸ್ ವರಿಷ್ಠಾಧಿಕಾರಿ ಬಾಬಾಸಾಹೇಬ ನೇಮಗೌಡ ಮಾತನಾಡಿ, ತನಿಖೆ ಮುಂದುವರಿದಿದೆ.
ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುತ್ತೇವೆ.ಬಹುಶಃ ಅಪರಾಧಿಗಳು ತೆರೆದ ತಾರಸಿಯ ಮೂಲಕ ಪ್ರವೇಶ ಪಡೆದಿರಬಹುದು . ಕಟ್ಟಡದ ಮತ್ತು ಅಪರಾಧ ಎಸಗಿದ .” ಕರ್ನಾಟಕದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಅವರು ದುಃಖತಪ್ತ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.