ನವದೆಹಲಿ: ಕೇಂದ್ರ ಗೃಹ ಸಚಿವಾಲಯ ಮೇ.15 ರಂದು ಪೌರತ್ವ ತಿದ್ದುಪಡಿ ಕಾಯ್ದೆಯಡಿ 14 ಜನರಿಗೆ ಪೌರತ್ವ ಪ್ರಮಾಣಪತ್ರಗಳನ್ನು ಹಸ್ತಾಂತರಿಸಿದೆ.
2024ರ ಪೌರತ್ವ (ತಿದ್ದುಪಡಿ) ನಿಯಮಗಳ ಅಧಿಸೂಚನೆಯ ನಂತರ ಮೊದಲ ಈ ಪ್ರಮಾಣಪತ್ರವನ್ನು ಹಸ್ತರಿಸಲಾಗಿದೆ ಎಂದು ಗೃಹ ಇಲಾಖೆ ಹೇಳಿದೆ. ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರು ಇಂದು ಕೆಲವು ಅರ್ಜಿದಾರರಿಗೆ ಪೌರತ್ವ ಪ್ರಮಾಣಪತ್ರಗಳನ್ನು ನವದೆಹಲಿಯಲ್ಲಿ ಹಸ್ತಾಂತರಿಸಿದರು
ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಕಿರುಕುಳಕ್ಕೊಳಗಾದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ರಾಷ್ಟ್ರೀಯತೆಯನ್ನು ನೀಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದರು.
ದೆಹಲಿಯ ನಿರ್ದೇಶಕರ (ಜನಗಣತಿ ಕಾರ್ಯಾಚರಣೆ) ನೇತೃತ್ವದ ದೆಹಲಿಯ ಸಶಕ್ತ ಸಮಿತಿಯು ಸರಿಯಾದ ಪರಿಶೀಲನೆಯ ನಂತರ 14 ಅರ್ಜಿದಾರರಿಗೆ ಪೌರತ್ವ ನೀಡಲು ನಿರ್ಧರಿಸಿದೆ. ಅದರಂತೆ, ನಿರ್ದೇಶಕರು (ಜನಗಣತಿ ಕಾರ್ಯಾಚರಣೆ) ಈ ಅರ್ಜಿದಾರರಿಗೆ ಪ್ರಮಾಣಪತ್ರಗಳನ್ನು ನೀಡಿದ್ದಾರೆ ಎಂದು ಗೃಹ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಗೃಹ ಕಾರ್ಯದರ್ಶಿ ಅರ್ಜಿದಾರರನ್ನು ಅಜಯ್ ಕುಮಾರ್ ಭಲ್ಲಾ ಅಭಿನಂದಿಸಿದರು. ಈ ಕಾರ್ಯಕ್ರಮದಲ್ಲಿ.