ಬೆಂಗಳೂರು: ರೈತರಿಗೆ ದಿನನಿತ್ಯ ಒಂದಲ್ಲ ಒಂದು ರೀತಿ ಕಿರುಕುಳ ಕೊಡುತ್ತಲೇ ಇರಬೇಕು ಎಂದು ನಿರ್ಧರಿಸಿರುವ ಕಾಂಗ್ರೆಸ್ ಸರ್ಕಾರ, ಗೋಣಿ ಚೀಲದ ಕೊರತೆ ನೆಪ ಹೇಳಿ ಕೊಬ್ಬರಿ ಖರೀದಿ ಮಾಡದೆ ರೈತರನ್ನು ಬರಿಗೈಯಲ್ಲಿ ವಾಪಸ್ ಕಳುಹಿಸುತ್ತಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ ರಾಜ್ಯ ಸರ್ಕಾರದ ವಿರುದ್ಧ ಆರೋಪ ಎಸಗಿದ್ದಾರೆ.
ಇನ್ನು ಈ ವಿಷಯಕ್ಕೆ ಸಂಬಂಧಿಸಿದಂತೆ ಟ್ವಿಟ್ (ಪಸ್ತುತ ಎಕ್ಸ್) ಮಾಡಿದ ಅಶೋಕ, ಸಿಎಂ ಸಿದ್ದರಾಮಯ್ಯನವರೇ, “ನಿಮ್ಮ ಸರ್ಕಾರ ನಿಜವಾಗಿಯೂ ಬದುಕಿದೆಯೋ ಅಥವಾ ಸತ್ತಿದೆಯೋ ಒಮ್ಮೆ ಸ್ಪಷ್ಟವಾಗಿ ಹೇಳಿಬಿಡಿ. ಯಾವುದಾದರೂ ಒಂದು ಇಲಾಖೆ, ಒಬ್ಬ ಸಚಿವ ಸರಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿರುವ ಉದಾಹರಣೆ ನೀಡಿ ನೋಡೋಣ” ಎಂದು ಹೇಳಿದ್ದಾರೆ.
“ತಮ್ಮ ಆಡಳಿತದಲ್ಲಿ ಇಡೀ ಆಡಳಿತ ಯಂತ್ರ ಸ್ವಚ್ಛವಾಗಿದೆ. ಸಚಿವರಿಗೆ ಕೆಲಸ ಮಾಡಲು ಆಸಕ್ತಿ ಇಲ್ಲ, ಅಧಿಕಾರಿಗಳು ನಿಯಂತ್ರಣದಲಿಲ್ಲ. ಯಾವುದಕ್ಕೂ ಪೂರ್ವಸಿದ್ಧತೆ ಇಲ್ಲ, ಮುಂದಾಲೋಚನೆ ಇಲ್ಲ. ಯಾವುದೇ ಸಮಸ್ಯೆ ಬಂದರೂ ಅದಕ್ಕೆ ಕೇಂದ್ರ ಸರ್ಕಾರವೇ ಹೊಣೆ ಅಂತ ಕೈಚೆಲ್ಲೋದು ಇಲ್ಲವೇ ಚುನಾವಣಾ ನೀತಿ ಸಂಹಿತೆಯ ನೆಪ ಹೇಳಿ ಜಾರಿಕೊಳ್ಳೋದು. ಇದಕ್ಕಾ ಕನ್ನಡಿಗರು ನಿಮಗೆ ಮತ ನೀಡಿದ್ದು?” ಎಂದು ಪ್ರಶ್ನಿಸಿದ್ದಾರೆ.