ಜೂನ್ ೨೦ :
ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರುವ ನಟ ದರ್ಶನ್ ಅವರ ಗೆಳತಿ ಪವಿತ್ರಾ ಗೌಡ ಅವರ ಮಾಜಿ ಪತಿ ಸಂಜಯ್ ಸಿಂಗ್ ಅವರು ತನ್ನ ಅನುಮತಿ ಇಲ್ಲದೇ ತನ್ನ ಖಾಸಗಿ ಫೋಟೊಗಳನ್ನು ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ದೂರು ದಾಖಲಿಸುವುದಾಗಿ ತಿಳಿಸಿದ್ದಾರೆ.
ಈ ಹಿಂದೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ದರ್ಶನ್ ಹಾಗೂ ಪವಿತ್ರಾ ಗೌಡ ಅವರ ಪ್ರೀತಿಯ ಬಗ್ಗೆ ಸಾರ್ವಜನಿಕವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಹಾಗೂ ತಮ್ಮ ಫ್ಯಾಮಿಲಿ ಪೋಟೊವನ್ನು ಪೋಸ್ಟ್ ಮಾಡಿ ತಮ್ಮ ಕುಟುಂಬ ಜೀವನದ ಬಗ್ಗೆ ತಿಳಿಸಿದರು. ಈ ನಡುವೆ ಪವಿತ್ರಾ ಗೌಡ ಅವರು ದರ್ಶನ್ ಜೊತೆಗೆ ಕಳೆದ ಕೆಲವು ಕ್ಷಣಗಳ ಕೊಲಾಜ್ ವಿಡಿಯೊವನ್ನು ಹಂಚಿಕೊಂಡಾಗ ಇದಕ್ಕೆ ಪ್ರತಿಕ್ರಿಯಿಸಿದ ವಿಜಯಲಕ್ಷ್ಮಿ ತಮ್ಮ ಪತಿಯ ಪೋಟೊ ಹಂಚಿಕೊಂಡಿದ್ದಕ್ಕೆ ಆಕೆಯನ್ನು ಪ್ರಶ್ನಿಸಿದರು.
ನಂತರ ಕೋಪಗೊಂಡ ವಿಜಯಲಕ್ಷ್ಮಿ ಅವರು ಪವಿತ್ರಾ ಗೌಡ, ಅವರ ಪತಿ ಸಂಜಯ್ ಸಿಂಗ್ ಮತ್ತು ಮಗಳೊಂದಿಗೆ ಇರುವ ಪೋಟೊವನ್ನು ಪೋಸ್ಟ್ ಮಾಡಿದ್ದರು. ಇದಕ್ಕೆ ಸಿಟ್ಟಾದ ಪವಿತ್ರಾ ಗೌಡ ತನ್ನ ಮಾಜಿ ಪತಿಯ ಅನುಮತಿಯಿಲ್ಲದೆ ತಮ್ಮ ವೈಯಕ್ತಿಕ ಪೋಟೊವನ್ನು ಹಂಚಿಕೊಳ್ಳಲು ಯಾವುದೇ ಹಕ್ಕಿಲ್ಲ ಎಂದು ವಿಜಯಲಕ್ಷ್ಮಿ ವಿರುದ್ಧ ಕಿಡಿಕಾರಿದ್ದರು.
ಇದೀಗ ಈ ವಿಚಾರ ಹೊಸ ವಿವಾದಕ್ಕೆ ಕಾರಣವಾಗಿದ್ದು, ಸಂಜಯ್ ಸಿಂಗ್ ಅವರು ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯಲಕ್ಷ್ಮಿಯವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ವಿಜಯಲಕ್ಷ್ಮಿ ಅವರು ತನ್ನ ವೈಯಕ್ತಿಕ ಜೀವನದಲ್ಲಿ ಹಸ್ತಕ್ಷೇಪ ಮಾಡಿದ್ದಾರೆ. ತನ್ನ ಅನುಮತಿ ಇಲ್ಲದೇ ತನ್ನ ವೈಯಕ್ತಿಕ ಪೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಹಾಗಾಗಿ ಆಕೆಯ ವಿರುದ್ಧ ತಾನು ದೂರು ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ದರ್ಶನ್ ಅಭಿಮಾನಿಗಳಿಂದ ಕೊಲೆ ಬೆದರಿಕೆ:ಠಾಣೆಗೆ ದೂರು ನೀಡಿದ ಪ್ರಥಮ್
ಪವಿತ್ರಾ ಗೌಡ ಅವರು ತಮ್ಮ 18ನೇ ವಯಸ್ಸಿನಲ್ಲಿ ಸಂಜಯ್ ಸಿಂಗ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಸಂಜಯ್ ಅವರು ಚಾಮರಾಜಪೇಟೆಯಲ್ಲಿ ದಿನಸಿ ಅಂಗಡಿಯನ್ನು ನಡೆಸುತ್ತಿದ್ದರು. ಈ ದಂಪತಿಗೆ ಖುಷಿ ಗೌಡ ಎಂಬ ಮಗಳಿದ್ದಳು. ವೈವಾಹಿಕ ಅತೃಪ್ತಿಯಿಂದಾಗಿ ಅವರ ಸಂಬಂಧ ಮುರಿದುಬಿದ್ದಿತು. ಹಾಗಾಗಿ ಪವಿತ್ರ ಗೌಡ ತಮ್ಮ ಮಗಳು ಖುಷಿ ಜೊತೆ ವಾಸವಾಗಿದ್ದರು ಎನ್ನಲಾಗಿದೆ.