Mon. Dec 23rd, 2024

ಅಂತ್ಯಸಂಸ್ಕಾರ ಮಾಡಿದ್ದ ಮಗು ಬೆಳಗಾಗುವಷ್ಟರಲ್ಲಿ ಮರದಲ್ಲಿ ಪ್ರತ್ಯಕ್ಷ,ವಿಡಿಯೋ ನೋಡಿ!

ಅಂತ್ಯಸಂಸ್ಕಾರ ಮಾಡಿದ್ದ ಮಗು ಬೆಳಗಾಗುವಷ್ಟರಲ್ಲಿ ಮರದಲ್ಲಿ ಪ್ರತ್ಯಕ್ಷ,ವಿಡಿಯೋ ನೋಡಿ!

ಜುಲೈ 01: ಅಂತ್ಯಸಂಸ್ಕಾರ ಮಾಡಿದ್ದ ಮಗು ಬೆಳಗಾಗುವಷ್ಟರಲ್ಲಿ ಮರದಲ್ಲಿ ಪ್ರತ್ಯಕ್ಷವಾಗಿದೆ.ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಹೌದು, ವಿಚಿತ್ರವೆನಿಸಿದರೂ ಸತ್ಯ. ಮಂಠಾಳ ಗ್ರಾಮದ ಅಂಬಯ್ಯ ಸ್ವಾಮಿ ಎಂಬುವರ ಒಂದೂವರೆ ವರ್ಷದ ಮಗು ಅನಾರೋಗ್ಯದ ಹಿನ್ನೆಲೆಯಲ್ಲಿ ಮೃತಪಟಿತ್ತು. ಶನಿವಾರ (ಜೂ.29) ರಂದು ಅಂತ್ಯಕ್ರಿಯೆ ನೆರವೇರಿದೆ. ಮರುದಿನ ರವಿವಾರ (ಜೂ.29) ರಂದು ಬೆಳಗ್ಗೆ ಸಮಾಧಿ ಬಳಿ ಸಂಬಂಧಿಕರು ಬಂದು ನೋಡಿದಾಗ, ಯಾರೋ ಸಮಾಧಿ ಅಗೆದು ಮಗುವರನ್ನು ಹೊರ ತೆಗೆದು, ಒಂದು ಕಪ್ಪು ಬಟ್ಟೆಯನ್ನು ಜೋಳಿಗೆ ರೀತಿ ಗಿಡಕ್ಕೆ ಕಟ್ಟಿ ಮಗುವನ್ನು ಅದರಲ್ಲಿ ಹಾಕಲಾಗಿತ್ತು. ಬಳಿಕ ಗ್ರಾಮಸ್ಥರು ಮಗವನ್ನು ಮತ್ತೆ ಅದೆ ಸ್ಥಳದಲ್ಲಿ ಅಂತ್ಯಸಂಸ್ಕಾರ ಮಾಡಿದರು.

ಈ ಕೃತ್ಯವನ್ನು ಕಂಡ ಗ್ರಾಮಸ್ಥರು ಮತ್ತು ಪೋಷಕರ ಆತಂಕಗೊಂಡಿದ್ದಾರೆ. ಮಾಟಮಂತ್ರ ಮಾಡುವವರು ಹೀಗೆ ಮಾಡಿರಬಹುದೆಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಕೂಡ ರೀತಿಯಾಗಿ ಅನೇಕ ಘಟನೆಗಳು ನಡೆದಿದ್ದವು. ಶವಗಳನ್ನು ಸಮಾಧಿಯಿಂದ ಹೊರ ತೆಗೆದು ಪೂಜೆ ಮಾಡಿ, ಶವವನ್ನು ಹಾಗೆ ಬಿಟ್ಟು ಹೋಗಲಾಗಿತ್ತು.

video in social media viral
Whatsapp Group Join
facebook Group Join

Related Post

Leave a Reply

Your email address will not be published. Required fields are marked *

error: Content is protected !!
Enable Notifications OK No thanks