ನೆಲಮಂಗಲ, ಆ 7:
ಅಪಘಾತದ ವಿವರಗಳು:
ಸಿಂಚನಾ ಪತಿ ಮಂಜುನಾಥ್ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಅಪಘಾತದ ನಂತರ ಟಿಪ್ಪರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಪ್ರಕರಣವನ್ನು ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.
ಹೆರಿಗೆ ಪೂಜೆಗಾಗಿ ಹೋಗುವಾಗ ನಡೆದ ದುರಂತ:
ಆಗಸ್ಟ್ 17ಕ್ಕೆ 9 ತಿಂಗಳು ತುಂಬಲಿದ್ದ ಸಿಂಚನಾ, ತನ್ನ ಹೆರಿಗೆ ಸುಸೂತ್ರವಾಗಿ ಆಗಲಿ ಎಂದು ಪತಿ ಮಂಜುನಾಥ್ ಜೊತೆ ಶಿವಗಂಗೆಯ ಗಣಪತಿ ದೇವಾಲಯಕ್ಕೆ ಪೂಜೆ ಸಲ್ಲಿಸಲು ಹೋಗಿದ್ದರು. ದಾಬಸ್ ಪೇಟೆಯಿಂದ ತೋಟನಹಳ್ಳಿ ಗ್ರಾಮಕ್ಕೆ ವಾಪಸಾಗುವ ಮಾರ್ಗದಲ್ಲಿ, ವೇಗವಾಗಿ ಬಂದ ಟಿಪ್ಪರ್ ಲಾರಿ ಅವರ ಬೈಕಿಗೆ ಡಿಕ್ಕಿ ಹೊಡೆದಿದೆ. ಸಿಂಚನಾ ಕೆಳಗೆ ಬಿದ್ದಾಗ ಟಿಪ್ಪರ್ ಅವರ ಮೇಲೆ ಹರಿದ ಪರಿಣಾಮ, 8 ತಿಂಗಳ ಮಗು ಹೊಟ್ಟೆಯಿಂದ ಹೊರ ಬಂದು ನಡು ರಸ್ತೆಯಲ್ಲೇ ಪ್ರಾಣಬಿಟ್ಟಿದೆ.
ಸ್ಥಳೀಯರ ಆಕ್ರಂದನ:
ಈ ದುರಂತವನ್ನು ಕಂಡು ಸ್ಥಳೀಯರು ಕಣ್ಣೀರು ಹಾಕಿದ್ದಾರೆ. ಸಿಂಚನಾದ ಮಗುವಿನ ಸಾವಿನಿಂದ ಪತಿ ಮಂಜುನಾಥ್ ಹಾಗೂ ಅತ್ತೆಯ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಪತಿ ಮಂಜುನಾಥನ ಹೇಳಿಕೆ:
ಅಪಘಾತದ ಬಗ್ಗೆ ಮಾತನಾಡಿದ ಮಂಜುನಾಥ್, “ಶಿವಗಂಗೆ ಗಣೇಶನ ದೇವಸ್ಥಾನದಲ್ಲಿ ಪೂಜೆ ಮುಗಿಸಿಕೊಂಡು ತೋಟನಹಳ್ಳಿ ಗ್ರಾಮಕ್ಕೆ ವಾಪಸಾಗುತ್ತಿದ್ವಿ. ಈ ವೇಳೆ ವೇಗವಾಗಿ ಬಂದ ಟಿಪ್ಪರ್ ಲಾರಿ ನಮ್ಮ ಬೈಕಿಗೆ ಡಿಕ್ಕಿ ಹೊಡೆದು, ಸಿಂಚನಾ ಮೇಲೆ ಹರಿದು ಸ್ಥಳದಲ್ಲೇ ಸಾವಿಗೀಡಾದಳು. ಆ ಕ್ಷಣದಲ್ಲಿ ಮಗು ಹೊಟ್ಟೆಯಿಂದ ಹೊರ ಬಂದು ನಡು ರಸ್ತೆಯಲ್ಲಿ ಪ್ರಾಣ ಬಿಟ್ಟಿತು. ಈ ದೃಶ್ಯವನ್ನು ನೋಡಲು ನನಗೆ ಸಹನಿಯೇನಾಗಲಿಲ್ಲ” ಎಂದು ಹೇಳಿ ಕಣ್ಣೀರು ಹಾಕಿದ್ದಾರೆ.
ನೆಲಮಂಗಲದಲ್ಲಿ ಹೆಚ್ಚುತ್ತಿರುವ ಅಪಘಾತಗಳು:
ಕಳೆದ ಆರು ತಿಂಗಳಲ್ಲಿ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 90ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದು, 125ಕ್ಕೂ ಹೆಚ್ಚು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಈ ಅಪಘಾತದ ಬಳಿಕ ಜನರಲ್ಲಿ ಭಯ ಮನೆ ಮಾಡಿದೆ.
ಅಪಘಾತಗಳ ನಿಯಂತ್ರಣಕ್ಕೆ ಕ್ರಮ:
ಈ ದುರಂತ ಘಟನೆ ಮತ್ತೆ ಭಾರೀ ಆತಂಕ ಸೃಷ್ಟಿಸಿದ್ದು, ರಸ್ತೆ ಸುರಕ್ಷತೆ ಮತ್ತು ಚಾಲಕರ ಜವಾಬ್ದಾರಿ ಕುರಿತಂತೆ ಪ್ರಶ್ನೆಗಳು ಎದ್ದಿವೆ. ಅಧಿಕಾರಿಗಳು ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.