ಆ ೨೭:
ಸಂಘದ ಹೇಳಿಕೆಯ ಪ್ರಕಾರ, ಈ ಶೋರೂಮ್‌ನಲ್ಲಿ ಆರ್.ಟಿ.ಓ. ಅಧಿಕಾರಿಗಳು ನಿಯಮವನ್ನು ಮೀರಿ, ಚಾಲನ ಪರವಾನಿಗೆ ಇಲ್ಲದವರಿಗೆ ಸಹ ಎಫ್.ಸಿ. ಪ್ರಮಾಣ ಪತ್ರ ನೀಡುತ್ತಿದ್ದಾರೆ. ಇದರಿಂದ, ಅನರ್ಹರು ಆಟೋಗಳನ್ನು ಖರೀದಿಸಿ, ಸಾರ್ವಜನಿಕ ರಸ್ತೆಗಳ ಮೇಲೆ ಬೀಳುತ್ತಿದ್ದಾರೆ. ಇದು ಕಾನೂನು ಪಾಲಕರಾದ ನೈಜ ಆಟೋ ಚಾಲಕರಿಗೆ ತೊಂದರೆ ಉಂಟುಮಾಡುತ್ತಿದೆ.
ಇದೇ ವೇಳೆ, ಖಾಸಗಿ ಹಣಕಾಸು ಸಂಸ್ಥೆಗಳು ಸಹ ಈ ಅಕ್ರಮದಲ್ಲಿ ಪಾಲ್ಗೊಂಡು, ಯಾವುದೇ ದಾಖಲೆಗಳ ಪರಿಶೀಲನೆ ಇಲ್ಲದೇ, ಆಟೋ ಖರೀದಿಗೆ ಸಾಲ ಸೌಲಭ್ಯ ಒದಗಿಸುತ್ತಿರುವುದನ್ನು ದೂರುದಲ್ಲಿ ಉಲ್ಲೇಖಿಸಲಾಗಿದೆ.
ಸಂಗದವರು ವಿಶೇಷವಾಗಿ ಒತ್ತಿಹೇಳಿದಂತೆ, ಸಿ.ಎನ್.ಜಿ. ಆಟೋಗಳ ಡಿಲೆವರಿ ವೇಳೆ, ಯಾವುದೇ ಬ್ಯಾಡ್ಜ್ ಇರುವ ಚಾಲಕರಿಗೆ ಮಾತ್ರ ಮಾರಾಟ ಮಾಡಬೇಕಾದ ಕಾನೂನು ನಿಯಮವನ್ನು ಗಾಳಿಗೆ ತೂರಲಾಗಿದೆ. ಆದರೆ, ಶೋರೂಮ್ ತಮ್ಮ ತಾತ್ಕಾಲಿಕ ಲಾಭಕ್ಕಾಗಿ ಕೇವಲ ಆಧಾರ್ ಕಾರ್ಡ್ ಪಡೆದು ಆಟೋಗಳನ್ನು ಮಾರಾಟ ಮಾಡುತ್ತಿದೆ.
ಈ ಅಕ್ರಮದಿಂದಾಗಿ, ಕಾನೂನು ಪಾಲನೆ ಮಾಡುತ್ತಿರುವ ನೈಜ ಆಟೋ ಚಾಲಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಇದರಿಂದ, ನಿಯಮಬದ್ಧ ಚಾಲಕರಿಗೆ ಮಾತ್ರವಲ್ಲ, ಸಾರ್ವಜನಿಕರಿಗೂ ಅಪಘಾತದ ಅಪಾಯ ಎದುರಾಗಬಹುದು ಎಂದು ಚಾಲಕರ ಪರಿಷತ್ ಅಭಿಪ್ರಾಯಪಟ್ಟಿದೆ.
ಚಾಲಕರ ಸಂಘವು ಜಿಲ್ಲಾಧಿಕಾರಿಗಳಿಗೆ ಈ ಕಾನೂನು ಉಲ್ಲಂಘನೆಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲು, ಹಾಗೂ ಮುಂದಿನ ಅವಘಡಗಳನ್ನು ತಪ್ಪಿಸಲು ಮನವಿ ಮಾಡಿದೆ. ಹಾಗೂ, ನ್ಯಾಯ ದೊರಕಿಸಲು ಶಾಖಾ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಎಚ್ಚರಿಸಲಾಗಿದೆ.
ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಪ್ರಮುಖರಾದ ಅಧ್ಯಕ್ಷ ಲಕ್ಷ್ಮಣ ಚೌಹಾಣ್, ಉಪಾಧ್ಯಕ್ಷ ಶಿವಶರಣಪ್ಪ ಕುಂಬಾರ, ಖಜಾಂಚಿ ಹಣಮಯ್ಯ ಕಲಾಲ್, ಹಾಗೂ ಬಾಗಪ್ಪ ರಾಗಿರ, ಈಶ್ವರ್ ನಾಯಕ್, ಸಾಬಯ್ಯ ತಾಂಡೂಲ್ಕರ್, ಮಲ್ಲಯ್ಯ ಮುಷ್ಟೂರ್, ಅಮರ್ ಚವಾಣ್, ಹೀರಾಸಿಂಗ್ ಚೌಹಾಣ್, ಮರಗಪ್ಪ ನಾಯಕ, ಹಣಮಂತ ನಾಯಕ, ಅಂಬುಜಿ ರಾವ್, ಹಣಮಂತ ಬಬಲಾದಿ, ಆಶಪ್ಪ ಜಟ್ಟಿ, ಮೌನೇಶ್ ಮಡಿವಾಳ, ಗಾಲಿ ಪಟೇಲ್, ಹುಸೇನಿ, ಚಾಮನಹಳ್ಳಿ, ಜಲಾಲ್ ದರ್ಜೆ, ಮಹೇಶ್ ನಾಟೇಕರ್, ವಾಲ್ಮೀಕಿ ಚೌಹಾಣ್, ಬೀರಲಿಂಗ ಪೂಜಾರಿ, ದ್ಯಾನಪ್ಪ ಪೂಜಾರಿ, ಅಶೋಕ್ ಗಣಪುರ. ಸದಸ್ಯರು ದೂರು ಸಲ್ಲಿಕೆಯಲ್ಲಿ ಭಾಗಿಯಾಗಿದ್ದಾರೆ.
ಇದನ್ನು ಓದಿ: ಖರ್ಗೆ ಕುಟುಂಬದ ವಿರುದ್ಧ ಭೂ ಹಗರಣದ ಆರೋಪ: ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ