ಸೆ ೧೬: ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರವು ಸರ್ಕಾರದ ವಿವಿಧ ಯೋಜನೆಗಳ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಕಾರ್ಯಗಳಲ್ಲಿ ನಿರತರಾಗಿದ್ದು, ಈಗ ನಿರ್ದೇಶಕರ ಹುದ್ದೆಗಳನ್ನು ಭರ್ತಿ ಮಾಡಲು ಉದ್ಯೋಗಾವಕಾಶದ ನೋಟಿಫಿಕೇಶನ್ ಪ್ರಕಟಿಸಿದೆ. ಪ್ರತಿ ನೇಮಕಾತಿ ಹುದ್ದೆಗೆ ರೂ.1,25,000 ವೇತನ ಮತ್ತು ರೂ.15,000 ಸಾರಿಗೆ ಭತ್ಯೆ ನೀಡಲಾಗುತ್ತದೆ.
ಹುದ್ದೆ ವಿವರಗಳು:
- ಹುದ್ದೆ ಹೆಸರು: ನಿರ್ದೇಶಕರು
- ಹುದ್ದೆಗಳ ಸಂಖ್ಯೆ: 03
- ನೇಮಕಾತಿ ವಿಧ: ಗುತ್ತಿಗೆ ಆಧಾರಿತ
- ಮಾಸಿಕ ಸಂಭಾವನೆ: ರೂ.1,25,000
- ಸಾರಿಗೆ ಭತ್ಯೆ: ರೂ.15,000
ಅರ್ಹತೆಗಳು:
- ಶೈಕ್ಷಣಿಕ ಅರ್ಹತೆ: ಅರ್ಹ ಅಭ್ಯರ್ಥಿಗಳು ಅರ್ಥಶಾಸ್ತ್ರ, ಸಂಖ್ಯಾಶಾಸ್ತ್ರ, ಸಮಾಜಶಾಸ್ತ್ರ, ಪಬ್ಲಿಕ್ ಪಾಲಿಸಿ, ಕೃಷಿ, ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಅಥವಾ ಡೆವಲಪ್ಮೆಂಟ್ ಸ್ಟಡೀಸ್ ನಲ್ಲಿ ಪಿಹೆಚ್‌ಡಿ ಪದವಿಯನ್ನು ಹೊಂದಿರಬೇಕು.
- ಅನುಭವ: ಕನಿಷ್ಠ 5 ವರ್ಷಗಳ ಕಾರ್ಯಾನುಭವ ಇದ್ದು, 2 ಸಂಶೋಧನಾತ್ಮಕ ಪೇಪರ್‌ಗಳ ಪಬ್ಲಿಕೇಶನ್‌ಗಳು ನಡೆದಿರಬೇಕು.
- ಭಾಷಾ ಅರಿವು: ಕನ್ನಡ ಓದಲು, ಬರೆಯಲು ಹಾಗೂ ಮಾತನಾಡಲು ಸುಲಭವಾಗಿರಬೇಕು.
- ವಯಸ್ಸಿನ ಮಿತಿ: 45 ವರ್ಷಗಳ ವಯಸ್ಸಿಗೆ ಕಡಿಮೆಯಾಗಿರಬೇಕು.
- PMAY 2.0: ಹೊಸ ಮನೆಗಳಿಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ವಿಧಾನ
- ಕುಸಿದು ಬಿದ್ದ ಸೇತುವೆ ಅಭಿವೃದ್ಧಿಗೆ ಬಿಗಿಯಾದ ಕ್ರಮ: ಸರ್ಕಾರ 8 ಕೋಟಿ ಅನುದಾನ ಮಂಜೂರು!
- ಕೋಟ್ಯಾಂತರ ವೆಚ್ಚದಲ್ಲಿ ನಿರ್ಮಾಣಗೊಂಡು 2 ವರ್ಷ ಕಳೆದರೂ ಬೀಗಮುದ್ರೆ ಬಿದ್ದೇ ಇರುವ ನೂತನ ಪೊಲೀಸ್ ಠಾಣೆ..!
- SBI ಜೂನಿಯರ್ ಅಸೋಸಿಯೇಟ್ಸ್ ನೇಮಕಾತಿ 2024: 13,735 ಹುದ್ದೆಗಳಿಗಾಗಿ ಅರ್ಜಿ ಆಹ್ವಾನ
- ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆ ವಿಲೀನ: ರಾಜ್ಯ ಸರ್ಕಾರದ ಹೊಸ ಆದೇಶ
ಅರ್ಜಿಸಲ್ಲಿಕೆ:
ಈ ಹುದ್ದೆಗೆ ಅರ್ಜಿ ಸಲ್ಲಿಸಲು, ನಿಗದಿತ ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ‘ನಿರ್ದೇಶಕರು’ ಎಂದು ಹೆಸರಿಸಲಾದ ಲಕೋಟೆಯಲ್ಲಿ ಅರ್ಜಿಯನ್ನು ಖುದ್ದಾಗಿ ಅಥವಾ ನೊಂದಾಯಿತ ಅಂಚೆ ಮೂಲಕ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು:
ವಿಳಾಸ:
ಮುಖ್ಯ ಮೌಲ್ಯಮಾಪನಾಧಿಕಾರಿಗಳು,
ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರ,
541, 5ನೇ ಮಹಡಿ, 2ನೇ ಹಂತ,
ಬಹುಮಹಡಿಗಳ ಕಟ್ಟಡ,
ಬೆಂಗಳೂರು – 560 001.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05-10-2024 ಸಂಜೆ 5:30 ಗಂಟೆಯೊಳಗೆ.
ಅಧಿಕೃತ ಜಾಲತಾಣ:
ಹೆಚ್ಚಿನ ಮಾಹಿತಿಗೆ ಮತ್ತು ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಲು https://kmea.karnataka.gov.in ಗೆ ಭೇಟಿ ನೀಡಬಹುದು.
ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರದ ಬಗ್ಗೆ:
ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರವು 1960ರ ಕರ್ನಾಟಕ ಸೊಸೈಟಿಗಳ ನೋಂದಣಿ ಕಾಯ್ದೆಯಡಿಯಲ್ಲಿ ಸ್ಥಾಪಿತ ಸಂಸ್ಥೆಯಾಗಿದೆ. ಈ ಪ್ರಾಧಿಕಾರವು ಕರ್ನಾಟಕ ಸರ್ಕಾರದ ಯೋಜನೆಗಳ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನವನ್ನು ನಡೆಸುತ್ತದೆ.