ಸೆ.೨೦:- ಕರ್ನಾಟಕ ಸರ್ಕಾರವು ಯೆಲ್ಲೋ ಬೋರ್ಡ್ (Yellow Board) ಟ್ಯಾಕ್ಸಿ ಮತ್ತು ಆಟೋರಿಕ್ಷಾ ಚಾಲಕರ ಮಕ್ಕಳಿಗೆ ಮೆಟ್ರಿಕ್ ನಂತರದ (Post Metric) ಉನ್ನತ ವಿದ್ಯಾಭ್ಯಾಸವನ್ನು ಉತ್ತೇಜಿಸಲು “ವಿದ್ಯಾನಿಧಿ” ಯೋಜನೆಯನ್ನು ಘೋಷಿಸಿದೆ. ಈ ಯೋಜನೆಯಡಿ, ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‌ಗಳು, ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣಗಳಿಗಾಗಿ ಶಿಷ್ಯವೇತನವನ್ನು (Scholarship) ನೀಡಲಾಗುತ್ತದೆ.
ಸರ್ಕಾರದ ಈ ಹೊಸ ಕ್ರಮವು ಸಾಮಾಜಿಕ ಸಮಾನತೆ ಮತ್ತು ಶಿಕ್ಷಣವನ್ನು ಉತ್ತೇಜಿಸಲು ಮಹತ್ವದ ಹೆಜ್ಜೆಯಾಗಿದ್ದು, ಅನೇಕ ಬಡವರು ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ತಲುಪಿಸಲು ಸಹಾಯ ಮಾಡುತ್ತದೆ.
ಈ ಯೋಜನೆಯಡಿ ವಿದ್ಯಾರ್ಥಿಗಳಿಗೆ ಶಿಷ್ಯವೇತನದ ಮೊತ್ತವನ್ನು ಕೋರ್ಸ್ ಪ್ರಕಾರ ನಿಗದಿಪಡಿಸಲಾಗಿದ್ದು, ಇದು ವಿದ್ಯಾರ್ಥಿಗಳ ಶಿಕ್ಷಣವನ್ನು ಬೆಂಬಲಿಸಲು ಸಹಕಾರಿ ಆಗಲಿದೆ.
ಯೋಜನೆಯ ವಿವರಗಳು:
ಕ್ರಮ ಸಂಖ್ಯೆ | ಕೋರ್ಸ್ನ ಹೆಸರು/ವಿಧ | ಹುಡುಗರು/ಪುರುಷರು | ಹುಡುಗಿಯರು/ಅನ್ಯ ಲಿಂಗದವರು |
---|---|---|---|
1 | ಪದವಿಯ ಮುಂಚಿನ ಪಿ.ಯು.ಸಿ/ಐ.ಟಿ.ಐ/ಡಿಪ್ಲೋಮಾ | ₹ 2,500 | ₹ 3,000 |
2 | ಬಿ.ಎ/ಬಿ.ಎಸ್.ಸಿ/ಬಿ.ಕಾಂ, ಇತರ ಪದವಿ ಕೋರ್ಸ್‌ಗಳು (ಎಂ.ಬಿ.ಬಿ.ಎಸ್/ಬಿ.ಇ/ಬಿ.ಟೆಕ್ ಹೊರತುಪಡಿಸಿ) | ₹ 5,000 | ₹ 5,500 |
3 | ಎಲ್.ಎಲ್.ಬಿ/ಪ್ಯಾರಾ ಮೆಡಿಕಲ್/ಬಿ.ಫಾರ್ಮ್/ನರ್ಸಿಂಗ್, ಇತ್ಯಾದಿ ವೃತ್ತಿಪರ ಕೋರ್ಸ್‌ಗಳು | ₹ 7,500 | ₹ 8,000 |
4 | ಎಂ.ಬಿ.ಬಿ.ಎಸ್/ಬಿ.ಇ/ಬಿ.ಟೆಕ್ ಮತ್ತು ಸ್ನಾತಕೋತ್ತರ ಕೋರ್ಸ್‌ಗಳು | ₹ 10,000 | ₹ 11,000 |
ಅರ್ಜಿ ಸಲ್ಲಿಕೆ ಪ್ರಕ್ರಿಯೆ:
ಈ ಯೋಜನೆಯಡಿ ವಿದ್ಯಾರ್ಥಿಗಳು “ಸೇವಾ ಸಿಂಧು” ವೆಬ್ ಪೋರ್ಟಲ್ (https://sevasindhu.karnataka.gov.in) ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಈ ಪ್ರಕ್ರಿಯೆಯಲ್ಲಿ ಅರ್ಹ ವಿದ್ಯಾರ್ಥಿಗಳ ಆಧಾರ್ ಜೋಡಿತ ಬ್ಯಾಂಕ್ ಖಾತೆಗೆ ನೇರವಾಗಿ ನಗದು ಪಾವತಿಸಿಕೊಳ್ಳಲಾಗುವುದು (Direct Benefit Transfer-DBT).
ಇದನ್ನು ಓದಿ :-ಕೆಎಎಸ್ ಮರು ಪರೀಕ್ಷೆ, ಕಾನ್‌ಸ್ಟೇಬಲ್ ವಯೋಮಿತಿ ಸಡಿಲಿಕೆ, ದಸರಾ ಉದ್ಘಾಟನೆಗೆ ಹಂ.ಪ. ನಾಗರಾಜಯ್ಯ
ಯೆಲ್ಲೋ ಬೋರ್ಡ್ ಟ್ಯಾಕ್ಸಿ ಮತ್ತು ಆಟೋರಿಕ್ಷಾ ಚಾಲಕರ ಮಕ್ಕಳು, ತಮ್ಮ ಪೋಷಕರ ಚಾಲನಾ ಪರವಾನಿಗೆ ಸಂಖ್ಯೆ, ಆಧಾರ್ ಸಂಖ್ಯೆ ಹಾಗೂ ವಿದ್ಯಾರ್ಥಿಯ ಆಧಾರ್ ಸಂಖ್ಯೆಯನ್ನು ವೆಬ್‌ಸೈಟ್‌ನಲ್ಲಿ ಸೇರಿಸಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಜೊತೆಗೆ ಗ್ರಾಮ-ಒನ್, ಕರ್ನಾಟಕ-ಒನ್ ಮತ್ತು ಬೆಂಗಳೂರು-ಒನ್ ಕೇಂದ್ರಗಳ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಆದ್ದರಿಂದ, ಸರ್ಕಾರಿ ಆದೇಶದನ್ವಯ ಇಚ್ಛೆಯುಳ್ಳವರು ತಕ್ಷಣವೇ ಈ ಸೌಲಭ್ಯವನ್ನು ಬಳಸಿಕೊಳ್ಳಲು ಆಯುಕ್ತರು, ಸಾರಿಗೆ ಮತ್ತು ರಸ್ತೆ ಸುರಕ್ಷತೆ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- PMAY 2.0: ಹೊಸ ಮನೆಗಳಿಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ವಿಧಾನ
- ಕುಸಿದು ಬಿದ್ದ ಸೇತುವೆ ಅಭಿವೃದ್ಧಿಗೆ ಬಿಗಿಯಾದ ಕ್ರಮ: ಸರ್ಕಾರ 8 ಕೋಟಿ ಅನುದಾನ ಮಂಜೂರು!
- ಕೋಟ್ಯಾಂತರ ವೆಚ್ಚದಲ್ಲಿ ನಿರ್ಮಾಣಗೊಂಡು 2 ವರ್ಷ ಕಳೆದರೂ ಬೀಗಮುದ್ರೆ ಬಿದ್ದೇ ಇರುವ ನೂತನ ಪೊಲೀಸ್ ಠಾಣೆ..!
- SBI ಜೂನಿಯರ್ ಅಸೋಸಿಯೇಟ್ಸ್ ನೇಮಕಾತಿ 2024: 13,735 ಹುದ್ದೆಗಳಿಗಾಗಿ ಅರ್ಜಿ ಆಹ್ವಾನ
- ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆ ವಿಲೀನ: ರಾಜ್ಯ ಸರ್ಕಾರದ ಹೊಸ ಆದೇಶ