Mon. Dec 23rd, 2024

ರಾಯಚೂರು:ಉಪ ವಿಭಾಗಾಧಿಕಾರಿ ಮಹಿಬೂಬಿ ಎಂ. ಕಾರಟಗಿ ಅವರಿಗೆ ‘ವರ್ಷದ ಅತ್ಯುತ್ತಮ ಕಂದಾಯ ಅಧಿಕಾರಿ’ ಪ್ರಶಸ್ತಿ

ರಾಯಚೂರು:ಉಪ ವಿಭಾಗಾಧಿಕಾರಿ ಮಹಿಬೂಬಿ ಎಂ. ಕಾರಟಗಿ ಅವರಿಗೆ ‘ವರ್ಷದ ಅತ್ಯುತ್ತಮ ಕಂದಾಯ ಅಧಿಕಾರಿ’ ಪ್ರಶಸ್ತಿ

ಸೆ. ೨೮:- ರಾಯಚೂರು ಉಪ ವಿಭಾಗದ ಸಹಾಯಕ ಆಯುಕ್ತರಾದ (ಉಪ ವಿಭಾಗಾಧಿಕಾರಿ

) ಮಹಿಬೂಬಿ ಎಂ. ಕಾರಟಗಿ ಅವರಿಗೆ “ವರ್ಷದ ಅತ್ಯುತ್ತಮ ಕಂದಾಯ ಅಧಿಕಾರಿ – 2024” ಪ್ರಶಸ್ತಿಯನ್ನು ಕಂದಾಯ ಸಚಿವ ಕೃಷ್ಣಾ ಭೈರೇಗೌಡ ಅವರು ಪ್ರದಾನ ಮಾಡಿದರು. ಕಂದಾಯ ಇಲಾಖೆಯ ವಿವಿಧ ಸೇವೆಗಳನ್ನು ಸಾರ್ವಜನಿಕರಿಗೆ ಸಮರ್ಥವಾಗಿ ಒದಗಿಸಿದ ನಿಟ್ಟಿನಲ್ಲಿ ಈ ಶ್ರೇಷ್ಠ ಸೇವೆಗಾಗಿ ಮಹಿಬೂಬಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕರ್ನಾಟಕ ಸರ್ಕಾರವು ಪ್ರತಿವರ್ಷ ಕಂದಾಯ ಇಲಾಖೆಯ ಅತ್ಯುತ್ತಮ ಸೇವಾ ಸಾಧನೆಗೋಸ್ಕರ ಈ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ.

ಅಭಿನಂದನಾ ಸಮಾರಂಭ
ಈ ಪ್ರಶಸ್ತಿ ಪ್ರಧಾನ ಸಮಾರಂಭವು ಬೆಂಗಳೂರಿನ ವಿಕಾಸ ಸೌಧದ ಕೊಠಡಿ ಸಂಖ್ಯೆ 419ರಲ್ಲಿ ಶುಕ್ರವಾರ ನಡೆಯಿತು. ಕಂದಾಯ ಸಚಿವ ಕೃಷ್ಣಾ ಭೈರೇಗೌಡ ಅವರು ಮಹಿಬೂಬಿ ಎಂ. ಕಾರಟಗಿ ಅವರನ್ನು “ವರ್ಷದ ಅತ್ಯುತ್ತಮ ಕಂದಾಯ ಅಧಿಕಾರಿ” ಎಂದು ಗೌರವಿಸಿದರು. ಮಹಿಬೂಬಿ ಅವರು ಕಂದಾಯ ಇಲಾಖೆಯ ವಿವಿಧ ಜವಾಬ್ದಾರಿಗಳನ್ನು ಪಾರದರ್ಶಕವಾಗಿ ನಿರ್ವಹಿಸುವ ಮೂಲಕ ಸಾರ್ವಜನಿಕ ಸೇವೆಯನ್ನು ಮತ್ತಷ್ಟು ಉತ್ತಮಗೊಳಿಸಿದ್ದಾರೆ.

ಅತ್ಯುತ್ತಮ ಆಡಳಿತಕ್ಕಾಗಿ ಗೌರವ
ಮಹಿಬೂಬಿ ಕಾರಟಗಿ ಅವರು ನಿಸ್ವಾರ್ಥ ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸುತ್ತಿದ್ದು, ರಾಯಚೂರು ಜಿಲ್ಲೆಯ ಜನತೆಗೆ ಸದಾ ಸಮರ್ಥ ಸೇವೆಗಳನ್ನು ಒದಗಿಸುತ್ತಿದ್ದಾರೆ. ಅವರ ಈ ಸೇವಾ ಶ್ರೇಷ್ಠತೆಗೆ ಈ ಪ್ರಶಸ್ತಿ ದೊಡ್ಡ ಗೌರವವಾಗಿದೆ. ಕರ್ನಾಟಕದ ನಾಗರೀಕರಿಗೆ ಪಾರದರ್ಶಕ ಮತ್ತು ಜನಪರ ಆಡಳಿತ ನೀಡುವ ಸವಾಲುಗಳನ್ನು ಮಹಿಬೂಬಿ ಅವರಂತಹ ಅಧಿಕಾರಿಗಳು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ.

ಕಂದಾಯ ಇಲಾಖೆಯ ಹೊಸ ಲೋಗೋ ಬಿಡುಗಡೆ
ಅಭಿನಂದನಾ ಸಮಾರಂಭದಲ್ಲಿ ಕಂದಾಯ ಇಲಾಖೆಯ ದ್ಯೇಯೋದ್ದೇಶವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ, ಹೊಸ ಲೋಗೋವನ್ನು ಕಂದಾಯ ಸಚಿವರು ಬಿಡುಗಡೆ ಮಾಡಿದರು. ಈ ಲೋಗೋ ಕರ್ನಾಟಕದ ಜನತೆಗೆ ಪಾರದರ್ಶಕ ಸೇವೆ ನೀಡುವ ನಮ್ಮ ನಿಲುವು ಮತ್ತು ಆದರ್ಶಗಳನ್ನು ಪ್ರತಿನಿಧಿಸುತ್ತದೆ.




Whatsapp Group Join
facebook Group Join

Related Post

Leave a Reply

Your email address will not be published. Required fields are marked *

error: Content is protected !!
Enable Notifications OK No thanks