Sun. Jan 12th, 2025

ದಸರಾ ಕಾರ್ಯಕ್ರಮದಲ್ಲಿ ರಾಜಕಾರಣದ ಅಶ್ಲೀಲ ಛಾಯೆ: ವಿಶ್ವನಾಥ್ ಕಿಡಿ

ದಸರಾ ಕಾರ್ಯಕ್ರಮದಲ್ಲಿ ರಾಜಕಾರಣದ ಅಶ್ಲೀಲ ಛಾಯೆ: ವಿಶ್ವನಾಥ್ ಕಿಡಿ

ಆ ೦೪:- ಮೈಸೂರು ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಜಕಾರಣದ ತಣ್ಣನೆಯ ವಾಸನೆ ತುಂಬಿದ್ದು, ಇದರಿಂದ ನಾಡಹಬ್ಬದ ಪಾವಿತ್ರ್ಯತೆಗೆ ಧಕ್ಕೆ ಬಂದಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್

ಬೇಸರ ವ್ಯಕ್ತಪಡಿಸಿದ್ದಾರೆ. ಅವರು ಮಾತನಾಡಿದಂತೆ, ಚಾಮುಂಡೇಶ್ವರಿ ಸನ್ನಿಧಿಯಲ್ಲಿ ನಡೆದ ದಸರಾ ಉದ್ಘಾಟನಾ ವೇದಿಕೆ ರಾಜಕೀಯ ಚರ್ಚೆಗೆ ತುತ್ತಾದ ಕಾರಣ ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ದಸರಾ ಕಾರ್ಯಕ್ರಮವು ಒಂದು ನಾಡಹಬ್ಬ. ಇದು ಧಾರ್ಮಿಕ, ಸಾಂಸ್ಕೃತಿಕ ಹಾಗೂ ಐತಿಹಾಸಿಕ ಪರಂಪರೆ ಮತ್ತು ಆಚರಣೆಗೆ ಸಂಬಂಧಿಸಿದ ಆಚರಣೆ. ಇಂತಹ ವೇದಿಕೆಯು ರಾಜಕೀಯ ಚರ್ಚೆಯ ವೇದಿಕೆಯಾಗಬಾರದು,” ಎಂದು ವಿಶ್ವನಾಥ್ ಅಭಿಪ್ರಾಯಪಟ್ಟರು. “ಸಾಹಿತಿ ಹಂಪ ನಾಗರಾಜಯ್ಯ ಅವರೇನು ದಸರಾ ಇತಿಹಾಸ, ಮಹಾರಾಜರ ಕೊಡುಗೆ, ಅಥವಾ ನಾಡಹಬ್ಬದ ಐತಿಹಾಸಿಕ ಮಹತ್ವದ ಬಗ್ಗೆ ಮಾತನಾಡದೇ, ರಾಜಕೀಯ ಭಾಷಣ ಮಾಡಿದ್ದಾರೆ” ಎಂದು ಅವರು ಖೇದ ವ್ಯಕ್ತಪಡಿಸಿದರು.

ಸಿದ್ದರಾಮಯ್ಯನಿಗೆ ಟಾಂಗ್:

ಹಿಂದೆ ಚಾಮುಂಡೇಶ್ವರಿ ದೇವಿಗೆ ಲಘುವಾಗಿ ಮಾತನಾಡುತ್ತಿದ್ದ ಸಿದ್ದರಾಮಯ್ಯ ಅವರು ಈಗ ತಾಯಿಯ ಆಶೀರ್ವಾದ ಬೇಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ ವಿಶ್ವನಾಥ್, “ನಾನೇನೂ ತಪ್ಪು ಮಾಡಿಲ್ಲ” ಎಂಬ ಸಿದ್ದರಾಮಯ್ಯನ ಹೇಳಿಕೆಯನ್ನು ಪ್ರಶ್ನಿಸಿದರು. “ಸಿದ್ದರಾಮಯ್ಯ ಅವರು ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಬೇಕಾಗಿದ್ದು, ತಾಯಿ ಚಾಮುಂಡೇಶ್ವರಿಯ ಅಶೀರ್ವಾದ ಬೇಡುವುದು ರಾಜಕೀಯ ಲಾಭಕ್ಕಾಗಿ ಮಾತ್ರ” ಎಂದು ಅವರು ಕಿಡಿಕಾರಿದರು.

ಜಿಟಿಡಿ ಕುರಿತು ವಾಗ್ದಾಳಿ:

ಜಿಡಿ ದೇವೇಗೌಡರು ಸಿದ್ದರಾಮಯ್ಯ ಅವರನ್ನು ಹೊಗಳುತ್ತಿರುವುದು ಬೂಟಾಟಿಕೆ ತರದ ರೀತಿ ಎಂದು ಭಾವಿಸುತ್ತೇನೆ ಎಂದ ವಿಶ್ವನಾಥ್, “ಜೆಡಿಎಸ್‌ ಮಾಜಿ ಶಾಸಕಾಂಗ ಪಕ್ಷದ ನಾಯಕನ ಸ್ಥಾನವನ್ನು ಕಳೆದುಕೊಂಡಿದ್ದು, ಅವರ ಕೋಪಕ್ಕೆ ಮತ್ತೊಂದು ಕಾರಣ” ಎಂದರು. ಮುಡಾ ಹಗರಣದ ಬಗ್ಗೆ ಇಷ್ಟು ದಿನ ಮೌನವಾಗಿದ್ದ ಜಿಟಿಡಿ ಈಗ ಏಕೆ ಬಾಯಿ ಬಿಟ್ಟಿದ್ದಾರೆ ಎಂಬ ಪ್ರಶ್ನೆವನ್ನು ವಿಶ್ವನಾಥ್ ಒತ್ತಿಹೇಳಿದರು.

“ಮೈಸೂರಿನಲ್ಲಿ ರಾಜಕೀಯ ನಾಯಕರು ಸೇರಿ ನಗರದ ಇಮೇಜ್‌ನ್ನು ಹಾಳು ಮಾಡುತ್ತಿದ್ದಾರೆ. ರಾಜಕಾರಣಿಗಳು ನಗರದ ಭವಿಷ್ಯವನ್ನು ಕೆಡಿಸುತ್ತಿದ್ದಾರೆ,” ಎಂದು ವಿಶ್ವನಾಥ್ ಕಿಡಿಕಾರಿದರು.

Whatsapp Group Join
facebook Group Join
0

Related Post

Leave a Reply

Your email address will not be published. Required fields are marked *

error: Content is protected !!
Enable Notifications OK No thanks