ಯಾದಗಿರಿ, ಅ ೨೯:–ಹಿರಿಯರ ಕಾಡಿಕೆ ಪರಿಹರಿಸುತ್ತೇವೆ ಎಂಬ ನೆಪದಲ್ಲಿ ಗ್ರಾಮಸ್ಥರ ಅಜ್ಞಾನವನ್ನು ದುರ್ಬಳಕೆ ಮಾಡಿಕೊಂಡು, ಹಣ ವಸೂಲಿ ಮಾಡುತ್ತಿದ್ದ ಸ್ವಾಮೀಜಿ ವೇಷ ತೊಟ್ಟು ಬಂದ ಐದು ಜನರ ಗ್ಯಾಂಗ್‌ವನ್ನ ಗ್ರಾಮ ಯುವಕರು ಪತ್ತೆಹಚ್ಚಿ ತಕ್ಕ ಪಾಠ ಕಲಿಸಿದರು. ಈ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮಂಜಲಾಪುರದಲ್ಲಿ ನಡೆದಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಈ ಗ್ಯಾಂಗ್ ಗ್ರಾಮಕ್ಕೆ ಬಂದು “ನಿಮ್ಮ ಹಿರಿಯರ ಕಾಡಿಕೆ ನಿಮ್ಮನ್ನು ಕಾಡುತ್ತಿದೆ” ಎಂಬ ನೆಪದಲ್ಲಿ ಪುಟ್ಟ ಪೂಜೆ, ಮಾಟ-ಮಂತ್ರದ ನೆಪವೊಡ್ಡಿ ಪ್ರತಿ ಮನೆಯಿಂದ 10 ರಿಂದ 20 ಸಾವಿರ ರೂ. ವಸೂಲಿ ಮಾಡುತ್ತಿದೆ. ತಮ್ಮ ಪೂಜಾ ಸಾಮಾನ್ಯ ತಂತ್ರಗಳಿಂದ ಮಾತ್ರ ಸಮಸ್ಯೆ ಪರಿಹಾರವಾಗಲಿದೆ ಎಂಬಂತೆ ಮಾತುಗಳಿಂದ ಗ್ರಾಮಸ್ಥರನ್ನು ಬಲೆಗೆ ಹಾಕಿ, ಲಕ್ಷಾಂತರ ಹಣವನ್ನು ವಸೂಲಿಸುವ ಕೃತ್ಯದಲ್ಲಿ ತೊಡಗಿದ್ದ ಈ ನಕಲಿ ಸ್ವಾಮೀಜಿಗಳು ಮಹಿಳೆಯರನ್ನು ಗುರಿಯಾಗಿಸಿಕೊಂಡು, ಕೇವಲ ಅಜ್ಞಾನದ ದುರುದಪ್ಪಳನದಿಂದ ಹಣ ಬಾಚುತ್ತಿದ್ದರು.
ಸ್ಥಳೀಯ ಯುವಕರಿಗೆ ಈ ವಿಷಯ ಸಂಶಯಾಸ್ಪದವೆನಿಸಿತು. ಹೀಗಾಗಿ, ಯುವಕರು ಸುಳಿವು ಪಡೆದು ಮೂವರನ್ನು ಹಿಡಿದು, ಸ್ಥಳಕ್ಕೆ ಕೊಡೇಕಲ್ ಪೋಲಿಸರಿಗೆ ಕರೆಸಿದರು. ಈ ಸಂದರ್ಭದಲ್ಲಿ ಇಬ್ಬರು ಗ್ಯಾಂಗ್ ಸದಸ್ಯರು ಪರಾರಿಯಾಗಿದ್ದಾರೆ. ಪರಾರಿಯಾಗಿರುವವರ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಸ್ಥಳೀಯ ಮಹಿಳೆಯರಿಂದ ವಸೂಲಾದ ಹಣವನ್ನ ವಶಪಡಿಸಿಕೊಂಡ ಪೊಲೀಸರು, ಪ್ರಥಮ ಮಾಹಿತಿ ದಾಖಲಿಸಿ ಹೆಚ್ಚಿನ ತನಿಖೆ ಆರಂಭಿಸಿದ್ದಾರೆ. ಆತನಂದ್ ಎಂಬ ಗ್ರಾಮಸ್ಥನ ಹೆಸರಿನಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಸಂಬಂಧಸಿದ ಕೊಡೇಕಲ್ ಠಾಣೆಯ ಎಸೈ, “ಇಂತಹ ವಂಚನೆಗಳಿಂದ ಗ್ರಾಮಸ್ಥರು ಎಚ್ಚೆತ್ತುಕೊಳ್ಳಬೇಕು ಮತ್ತು ನಂಬಿಕೆಬಲೆಗೆ ಬಿದ್ದು ಹಣ ಕಳೆದುಕೊಳ್ಳಬಾರದು,” ಎಂದು ಹೇಳಿದರು.
ಹಿರಿಯರ ಕಾಡಿಕೆ ಹೆಸರಿನಲ್ಲಿ ನಡೆಯುತ್ತಿದ್ದ ವಂಚನೆ, ಯುವಕರ ಜಾಗ್ರತೆ ಮತ್ತು ಧೈರ್ಯದ ಮುಂದಾಗಿ ಮುರಿಯಿತು
- PMAY 2.0: ಹೊಸ ಮನೆಗಳಿಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ವಿಧಾನ
- ಕುಸಿದು ಬಿದ್ದ ಸೇತುವೆ ಅಭಿವೃದ್ಧಿಗೆ ಬಿಗಿಯಾದ ಕ್ರಮ: ಸರ್ಕಾರ 8 ಕೋಟಿ ಅನುದಾನ ಮಂಜೂರು!
- ಕೋಟ್ಯಾಂತರ ವೆಚ್ಚದಲ್ಲಿ ನಿರ್ಮಾಣಗೊಂಡು 2 ವರ್ಷ ಕಳೆದರೂ ಬೀಗಮುದ್ರೆ ಬಿದ್ದೇ ಇರುವ ನೂತನ ಪೊಲೀಸ್ ಠಾಣೆ..!
- SBI ಜೂನಿಯರ್ ಅಸೋಸಿಯೇಟ್ಸ್ ನೇಮಕಾತಿ 2024: 13,735 ಹುದ್ದೆಗಳಿಗಾಗಿ ಅರ್ಜಿ ಆಹ್ವಾನ
- ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆ ವಿಲೀನ: ರಾಜ್ಯ ಸರ್ಕಾರದ ಹೊಸ ಆದೇಶ