ಗುಜರಾತಿನ ವಲ್ಪಾದ್‌ನಲ್ಲಿ ಹನ್ಸಫರ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಮೊದಲು ಜನರೇಟರ್‌ನಲ್ಲಿ ಹಠಾತ್ ಕಾಣಿಸಿಕೊಂಡ ಬೆಂಕಿ ನಂತರ ಸಂಪೂರ್ಣ ಬೋಗಿಗೆ ವ್ಯಾಪಿಸಿದೆ. ಬೆಂಕಿ ನೋಡಿ ಭಯಭೀತರಾದ ಪ್ರಯಾಣಿಕರು ತಮ್ಮ ಲಗೇಜ್ ತೆಗೆದುಕೊಂಡು ಬೋಗಿಯಿಂದ ಇಳಿದು ಓಡಿದ್ದರಿಂದ ದೊಡ್ಡ ದುರಂತವೊಂದು ತಪ್ಪಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸದ್ಯ ಬೆಂಕಿ ನಿಯಂತ್ರಿಸಲು ಪ್ರಯತ್ನಿಸಲಾಗುತ್ತಿದೆ. ಘಟನೆಗೆ ಕಾರಣ ತಿಳಿದುಬಂದಿಲ್ಲ.