ಗಾಂಧಿ ಜಯಂತಿ: ಅಹಿಂಸಾ ಪರಮೋಧರ್ಮ ಇಂದು ಮಹಾತ್ಮ ಗಾಂಧಿಯವರ ಜನ್ಮದಿನ. ಅಹಿಂಸೆಯನ್ನೇ ಅಸ್ತ್ರವನ್ನಾಗಿಸಿಕೊಂಡು ದೇಶವನ್ನು ಗುಲಾಮಗಿರಿಯಿಂದ ಮುಕ್ತಗೊಳಿಸುವಲ್ಲಿ ‘ಬಾಪು’ ಮಹತ್ವದ ಪಾತ್ರ ವಹಿಸಿದ್ದರು. ಅವರು ಅಧಿಕಾರಕ್ಕಾಗಿ ಯಾವ ಕೆಲಸವನ್ನೂ ಮಾಡಲಿಲ್ಲ. ಧರ್ಮ, ಬಣ್ಣ, ಜಾತಿ ಮತ್ತು ಲಿಂಗ ತಾರತಮ್ಯದಂತಹ ಯಾವುದೇ ಚಿಂತನೆಯನ್ನು ಎಂದಿಗೂ ಬೆಂಬಲಿಸಲಿಲ್ಲ. ಅವರು ಯಾವಾಗಲೂ ತಮ್ಮ ಮಾತುಗಳಲ್ಲಿ ಮತ್ತು ಕಾರ್ಯಗಳಲ್ಲಿ ಅಂದುಕೊಂಡಿದ್ದನ್ನು ಮಾಡಿತೋರಿಸಿ, ಅಹಿಂಸೆ ಯಿಂದ ಎಲ್ಲವನ್ನೂ ಗೆಲ್ಲಬಹುದು ಎಂದು ತೋರಿಸಿಕೊಟ್ಟರು.
1904: ಭಾರತದ ಎರಡನೇ ಪ್ರಧಾನಿ
ಇಂದು ಲಾಲ್‌ಬಹದ್ದೂರ್ ಶಾಸ್ತ್ರಿ ಜನ್ಮದಿನ ಭಾರತ ಕಂಡ ಧೀಮಂತ ನಾಯಕ ಮಾಜಿ ಪ್ರಧಾನಿ ಲಾಲ್
ಬಹದ್ದೂರ್ ಶಾಸ್ತ್ರಿಯವರ ಜನ್ಮದಿನವೂ ಇಂದೇ ಆಗಿದೆ. ಅಕ್ಟೋಬರ್ 2, 1904 ರಂದು ಜನಿಸಿದ್ದ ಶಾಸ್ತ್ರಿ ಭಾರತದ ಎರಡನೇ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ದೇಶದ ಮೊದಲ ರೈಲ್ವೇ ಸಚಿವರಾಗಿ, ಗೃಹಮಂತ್ರಿಯಾಗಿಯೂ ಕೆಲಸ ಮಾಡಿದ್ದರು. ಪಿಎಂ ಆಗಿದ್ದಾಗ ಹಾಲಿನ ಉತ್ಪಾದನೆ ಮತ್ತು ಪೂರೈಕೆಯನ್ನು ಹೆಚ್ಚಿಸಲು ‘ಶ್ವೇತ ಕ್ರಾಂತಿ’ಯನ್ನು ಆರಂಭಿಸಿದ್ದರು. 1966ರಲ್ಲಿ ತಾಸ್ಕೆಂಟ್ ಒಪ್ಪಂದಕ್ಕೆ ತೆರಳಿದ್ದಾಗ ನಿಗೂಢವಾಗಿ ಸಾವನ್ನಪ್ಪಿದರು.
‘1000 ಮದ್ಯದಂಗಡಿಗೆ ಪರವಾನಗಿ ನೀಡಬಾರದು’
ಗಾಂಧಿ ಜಯಂತಿ ಹಿನ್ನೆಲೆ ಇಂದು ಸಂಜೆಯಿಂದ ನಾಡಿದ್ದು ಬೆಳಗ್ಗೆವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ಈ ನಡುವೆ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ತವರು ಜಿಲ್ಲೆ ಬಾಗಲಕೋಟೆಯ ಡಿಸಿ ಕಚೇರಿ ಎದುರು ಮಹಿಳೆಯರು ಧರಣಿ ನಡೆಸುತ್ತಿದ್ದಾರೆ. ಮದ್ಯಪಾನದಿಂದ ಕೆಲ ಮಹಿಳೆಯರು ಗಂಡನನ್ನು ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಮದ್ಯ ಮಾರಾಟ ಸಂಪೂರ್ಣ ಬಂದ್ ಆಗಬೇಕು. 1000 ಹೊಸ ಅಂಗಡಿಗಳಿಗೂ ಪರವಾನಗಿ ನೀಡಬಾರದೆಂದು ಆಗ್ರಹಿಸುತ್ತಿದ್ದಾರೆ.
ಅಕ್ಟೋಬರ್ 2: ಇತಿಹಾಸದಲ್ಲಿ ಇಂದು
1852: ರಸಾಯನಶಾಸ್ತ್ರಜ್ಞ ಮತ್ತು ನೊಬೆಲ್ ಪ್ರಶಸ್ತಿ ವಿಜೇತ
ವಿಲಿಯಂ ರಾಮ್ನ ಜನನ
1906: ಖ್ಯಾತ ಚಿತ್ರಕಾರ ರಾಜಾ ರವಿವರ್ಮ ನಿಧನ
1992: ನಟಿ ರಚಿತಾ ರಾಮ್ ಜನ್ಮದಿನ 1986: ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್ ಜನನ
*ಮಾನವ ಹಕ್ಕುಗಳ ದಿನ