ಕಲಬುರಗಿ, ಮೇ 17:
ಚತ್ತಿಸಘಡ ಮೂಲದ ಕಳ್ಳ ಸೋನು ಭಗಿರಥ ಕಲಬುರಗಿಯಲ್ಲಿ ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದನು. ಸೋಮವಾರ ಕುಡಿದ ನಶೆಯಲ್ಲಿ ಮಧ್ಯರಾತ್ರಿ ಕಮಿಷನರ್ ಕಚೇರಿ ಆವರಣದೊಳಗೆ ಬಂದಿದ್ದಾನೆ. ಬಳಿಕ ಆವರಣದಲ್ಲಿ ನಿಲ್ಲಿಸಿದ್ದ ಸಿಆರ್‌ಪಿಎಫ್ ಪೊಲೀಸರ ಬಸ್ ಒಳಗಡೆ ಹೋಗಿದ್ದಾನೆ. ಬಸ್ ಓರ್ವ ಕಾನ್ಸ್ಟೇಬಲ್ ಇದ್ದು, ನಿದ್ದೆಗೆ ಜಾರಿದ್ದರು.
ಪೊಲೀಸ್ ಕಾನ್ಸಟೇಬಲ್ ಬಸ್ನ ಕಿಟಕಿಗೆ ತಮ್ಮ ಬಟ್ಟೆ ನೇತು ಹಾಕಿ, ಮಲಗಿದ್ದರು. ಇದನ್ನು ಕಂಡ ಕಳ್ಳ ಸೋನು ಪೊಲೀಸ್ ಕಾನ್ಸಟೇಬಲ್ ಜೇಬಿನಲ್ಲಿದ್ದ ಬಸ್ ಕೀ ತೆಗೆದುಕೊಂಡಿದ್ದಾನೆ. ಬಳಿಕ ಬಸ್ ಸ್ಟಾರ್ಟ್ ಮಾಡುತ್ತಿದ್ದ ಹಾಗೆ ಪೊಲೀಸ್ ಕಾನ್ಸಟೇಬಲ್ ಎಚ್ಚೆತ್ತುಕೊಂಡಿದ್ದಾನೆ. ತಕ್ಷಣ ಪೊಲೀಸ್ ಕಾನ್ಸಟೇಬಲ್ ಆರೋಪಿ ಸೋನು ಭಗಿರಥನನ್ನು ಬಂಧಿಸಿದ್ದಾರೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.