- ಕಾರಿನಲ್ಲಿಯೇ AK-47 ಗನ್ ಬಳಸಿ ಹತ್ಯೆ ಮಾಡಲು ಸಿದ್ಧತೆ ನಡೆಸುತ್ತಿದ್ದ ಹಂತಕರು
ಜೂನ್ ೦೧: ಕೆಲವುದಿನಗಿಳಿಂದೆ ಬಾಲಿವುಡ್ ನಟ ಸಲ್ಮಾನ್ ಖಾನ್ ನಿವಾಸದ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ಆ ಬಳಿಕ ಗುಂಡಿನ ದಾಳಿ ಕೇಸ್ ತನಿಖೆಯನ್ನು ಮುಂಬೈ ಪೊಲೀಸರು ತೀವ್ರಗೊಳಿಸಿ ಗುಜರಾತ್ನಲ್ಲಿ ಇಬ್ಬರನ್ನು ಬಂಧಿಸಿದ್ದರು. ವಿಕ್ಕಿ ಗುಪ್ತ (24), ಸಾಗರ್ ಪಾಲ್ (21) ಬಂಧಿತ ಆರೋಪಿಗಳು ಎಂದು ಗುರುತಿಸಿಲಾಗಿದೆ.
ಆದರೆ ಇದೀಗ ನಟ ಸಲ್ಮಾನ್ ಖಾನ್ ಅವರನ್ನು ಫಾರ್ಮ್ ಹೌಸ್ ಬಳಿ ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ಹೌದು, ಮಹಾರಾಷ್ಟ್ರದ ಪನ್ವೇಲ್ನಲ್ಲಿರುವ ಸಲ್ಮಾನ್ ಖಾನ್ ಅವರ ಫಾರ್ಮ್ ಹೌಸ್ ಬಳಿ ಕಾರಿನಲ್ಲಿಯೇ ಎಕೆ-47 ರೈಫಲ್ಗಳನ್ನು ಬಳಸಿ ಹತ್ಯೆ ಮಾಡಲು ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ತಂಡವು ಸಂಚು ರೂಪಿಸಿತ್ತು ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ. ಸದ್ಯ ಈ ಸಂಬಂಧ ನಾಲ್ವರು ಶೂಟರ್ಗಳನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಧನಂಜಯ್ ತಾಪ್ಪಿಂಗ್ ಅಲಿಯಾಸ್ ಅಜಯ್ ಕಶ್ಯಪ್, ಗೌರವ ಭಾಟಿಯಾ ಅಲಿಯಾಸ್ ನಹಿ, ವಾಪ್ಪಿ ಖಾನ್ ಅಲಿಯಾಸ್ ವಾಸೀಂ ಚಿಕ್ನಾ ಹಾಗೂ ರಿಝಾನ್ ಖಾನ್ ಅಲಿಯಾಸ್ ಜಾವೇದ್ ಖಾನ್ ಎಂದು ಗುರುತಿಸಲಾಗಿದೆ.
ಈ ನಾಲ್ಕು ಮಂದಿ ಶೂಟರ್ಗಳು ಸಲ್ಮಾನ್ ಖಾನ್ ಅವರ ಫಾರ್ಮ್ ಹೌಸ್ ಹಾಗೂ ಗುಂಡು ಹಾರಿಸಲಿರುವ ಸ್ಥಳದ ಪರಿಶೀಲನೆ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ. ಸಲ್ಮಾನ್ ಖಾನ್ ಮೇಲೆ ಎಕೆ-47 ರೈಫಲ್ ಗಳಲ್ಲದೆ ಇತರ ಶಸ್ತ್ರಾಸ್ತ್ರಗಳಿಂದ ದಾಳಿ ನಡೆಸುವಂತೆ ನಾಲ್ವರು ಶೂಟರ್ಗಳಿಗೆ ಸೂಚನೆ ನೀಡಿರುವ ವಿಡಿಯೊಗಳನ್ನು ಆರೋಪಿಗಳ ಮೊಬೈಲ್ನಲ್ಲಿ ಪತ್ತೆಯಾಗಿದೆ. ಹೀಗಾಗಿ ಆರೋಪಿಗಳ ಬಳಿಯ ಫೋನ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನು ಬಂಧಿತ ಆರೋಪಿಗಳ ವಿಚಾರಣೆಯ ವೇಳೆ ಅಜಯ್ ಕಶ್ಯಪ್, ಎಂ16, ಎಕೆ47 ಹಾಗೂ ಎಕೆ-92 ರೈಫಲ್ಗಳನ್ನು ಖರೀದಿಸಲು ಪಾಕಿಸ್ತಾನದಲ್ಲಿರುವ ದೋಗಾ ಎಂಬ ಶಸ್ತ್ರಾಸ್ತ್ರ ವ್ಯಾಪಾರಿಯ ಸಂಪರ್ಕದಲ್ಲಿದ್ದೆ ಎಂದು ಬಹಿರಂಗಪಡಿಸಿದ್ದಾನೆ.