Mon. Dec 23rd, 2024

ದರ್ಶನ್ ಅಭಿಮಾನಿಗಳಿಂದ ಕೊಲೆ ಬೆದರಿಕೆ:ಠಾಣೆಗೆ ದೂರು ನೀಡಿದ ಪ್ರಥಮ್

ದರ್ಶನ್ ಅಭಿಮಾನಿಗಳಿಂದ ಕೊಲೆ ಬೆದರಿಕೆ:ಠಾಣೆಗೆ ದೂರು ನೀಡಿದ ಪ್ರಥಮ್

ಇದೀಗ ಪ್ರಥಮ್, ದರ್ಶನ್​ರ ಅಭಿಮಾನಿಗಳ ವಿರುದ್ಧ ಜ್ಞಾನ ಭಾರತಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ರೇಣುಕಾ ಸ್ವಾಮಿ  ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನವಾಗಿದ್ದು, ಹಲವು ಸೆಲೆಬ್ರಿಟಿಗಳು ದರ್ಶನ್ ಬಗೆಗಿನ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ ದರ್ಶನ್ ಬಗ್ಗೆ ಋಣಾತ್ಮಕವಾಗಿ ಮಾತನಾಡಿದ ಸೆಲೆಬ್ರಿಟಿಗಳಿಗೆ ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ನಿಂದನೆ, ಬೆದರಿಕೆ ಹಾಕುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇತ್ತೀಚೆಗೆ ಮಾಧ್ಯಮಗಳ ಬಳಿ ದರ್ಶನ್ ಪ್ರಕರಣದ ಬಗ್ಗೆ ಮಾತನಾಡಿದ್ದ ನಟ ಪ್ರಥಮ್ ವಿರುದ್ಧ ದರ್ಶನ್ ಅಭಿಮಾನಿಗಳು ರೊಚ್ಚಿಗೆದ್ದಿದ್ದು, ಕೊಲೆ ಬೆದರಿಕೆ ಹಾಕಿದ್ದಾರೆ. ಇದೀಗ ಪ್ರಥಮ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದಾರೆ.

ಇತ್ತೀಚೆಗಷ್ಟೆ ಮಾಧ್ಯಮಗಳ ಬಳಿ ಮಾತನಾಡಿದ್ದ ನಟ ಪ್ರಥಮ್, ‘ದರ್ಶನ್ ಅನ್ನು ಬಂಧಿಸಿಟ್ಟಿರುವ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಎದುರು ನಿಂತಿರುವ ದರ್ಶನ್ ಅಭಿಮಾನಿಗಳನ್ನು ಲಾಠಿ ತೆಗೆದುಕೊಂಡು ಹೊಡೆಯಬೇಕು ಅನಿಸುತ್ತದೆ. ಅಲ್ಲಿರುವ ಒಬ್ಬರೂ ಸಹ ಅವರ ಅಪ್ಪ-ಅಮ್ಮನಿಗೆ ಒಂದೊತ್ತು ಊಟ ಹಾಕುವ ಯೋಗ್ಯತೆ ಇಲ್ಲದವರು. ಮೊದಲು ಅವರನ್ನು ಭಾರಿಸಿ ಅಟ್ಟಬೇಕು’ ಎಂದಿದ್ದರು. ಅಲ್ಲದೆ, ದರ್ಶನ್ ಅನ್ನು ಸೂಪರ್ ಸ್ಟಾರ್ ಎಂದು ಕರೆದ ಬಗ್ಗೆಯೂ ಆಕ್ಷೇಪ ಎತ್ತಿದ್ದರು. ಇದು ದರ್ಶನ್ ಅಭಿಮಾನಿಗಳನ್ನು ಕೆರಳಿಸಿತ್ತು.

ಇದೀಗ ಪ್ರಥಮ್, ದರ್ಶನ್​ರ ಅಭಿಮಾನಿಗಳ ವಿರುದ್ಧ ಜ್ಞಾನ ಭಾರತಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಪ್ರಥಮ್, ‘ಕಳೆದ ಎರಡು ಮೂರು ದಿನಗಳಿಂದ ಬೆದರಿಕೆ ಕರೆಗಳು ಬರ್ತಿದ್ದವು. ಜ್ಞಾನಭಾರತಿ ಪೊಲೀಸ್ ಠಾಣೆಗೆ ಕಂಪ್ಲೀಟ್ ಮಾಡಿದ್ದೇನೆ. ಎನ್ ಸಿ ಆರ್ ಆಗಿದೆ. ಪೊಲೀಸರು ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಅರೆಸ್ಟ್ ಮಾಡೋದು ಬೇಡ ವಾರ್ನ್ ಮಾಡಿ ಬಿಡಿ ಅಂಥ ಹೇಳಿದ್ದೇನೆ’ ಎಂದಿದ್ದಾರೆ.

ಕೊಲೆ ಆರೋಪದಲ್ಲಿ ಬಂಧಿತವಾಗಿರುವ ದರ್ಶನ್ ಬಿಡುಗಡೆ ಆದರೆ ನಾನು ಸಹ ಖುಷಿ ಪಡುವೆ. ಇಂಡಸ್ಟ್ರಿಗೆ ಹಾಗೂ ಕಲಾವಿದರಿಗೆ ಕಳಂಕ ತೊಲಗಿತಲ್ಲ ಅಂತ ಖುಷಿಯಾಗುತ್ತೆ’ ಎಂದ ಪ್ರಥಮ್, ದರ್ಶನ್ ಅಭಿಮಾನಿಗಳನ್ನುದ್ದೇಶಿಸಿ, ‘ಮೊದಲು ನಿಮ್ಮ ಅಪ್ಪ ಅಮ್ಮಂದಿರ ಚನ್ನಾಗಿ ನೋಡಿಕೊಳ್ಳಿ, ಕಲಾವಿದರನ್ನು ಕಲಾವಿದರಾಗಿ ಕಾಣಿ. ಬಾಸ್ ಅಂತೆಲ್ಲಾ ಕರೆದು ಮೆರಿಸಬೇಡಿ, ನಾನು ಡೆವಿಲ್ ಅಪೋಸಿಟ್ ಕರ್ನಾಟಕ ಅಳಿಯ ರಿಲೀಸ್ ಮಾಡ್ತಿನಿ, ಈ ತರ ಬೆದರಿಕೆಗಳಿಗೆ ನಾನು ಹೆದರಲ್ಲ’ ಎಂದಿದ್ದಾರೆ.

Whatsapp Group Join
facebook Group Join

Related Post

One thought on “ದರ್ಶನ್ ಅಭಿಮಾನಿಗಳಿಂದ ಕೊಲೆ ಬೆದರಿಕೆ:ಠಾಣೆಗೆ ದೂರು ನೀಡಿದ ಪ್ರಥಮ್”

Leave a Reply

Your email address will not be published. Required fields are marked *

error: Content is protected !!
Enable Notifications OK No thanks