ಜ ೦೮:
ಬೆಳಗಾವಿಯ ಉಚ್ಚಗಾವಿಯಲ್ಲಿ ನಡೆದ ಹಿಂದೂ ಸ್ನೇಹ ಸಮ್ಮೇಳನದಲ್ಲಿ ಮಾಡಿದ ಕೆಎಸ್ ಈಶ್ವರಪ್ಪ, ದೇವಸ್ಥಾನಗಳಲ್ಲಿ ಹಿಂದೂಗಳ ಜೀವವಿದೆ ಎಂದು ಮುಸ್ಲಿಂ ದೊರೆಗಳಿಗೆ ಗೊತ್ತಿತ್ತು. ಹೀಗಾಗಿ ಮಂದಿರಗಳನ್ನು ಕೆಡವಿದರೆ ಭಾರತ ನಮ್ಮದಾಗುತ್ತೆಂದು ಮುಸ್ಲಿಂ ದೊರೆಗಳು ಭಾವಿಸಿದ್ದರು. ಕಾಶಿ ವಿಶ್ವನಾಥನ ದೇವಸ್ಥಾನ ಮಥುರ ದೇವಸ್ಥಾನಗಳನ್ನು ಅರ್ಧ ಕೆಡವಿ ಮಸೀದಿ ನಿರ್ಮಿಸಿದ್ದರು.
ರಾಮ ಜನಿಸಿದ್ದ ಜಾಗದಲ್ಲೇ ಇಂದು ಭವ್ಯ ರಾಮಮಂದಿರವನ್ನು ಕಟ್ಟುತ್ತಿದ್ದೇವೆ. ಇನ್ನೆರಡು ದೇವಸ್ಥಾನಕ್ಕೆ ಕೋರ್ಟ್ ಆದೇಶಿಸಿದೆ. ಇನ್ನೊಂದು ವರ್ಷದಲ್ಲಿ ಮಥುರಾ, ಕಾಶಿ ದೇಗುಲದ ಪಕ್ಕದಲ್ಲಿರುವ ಮಸೀದಿ ಧ್ವಂಸವಾಗುತ್ತದೆ. ಆ ಜಾಗದಲ್ಲಿ ದೇವಸ್ಥಾನವನ್ನು ಕಟ್ಟುತ್ತೇವೆ ಅದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿದರು.
ಹಿಂದೂ, ಮುಸ್ಲಿಂರು ಸಹೋದರರಂತೆ ಇರಬೇಕು ಎಂಬುದು ನಮ್ಮ ಆಸೆ. ಹೀಗಾಗಿ ಎಲ್ಲೆಲ್ಲಿ ದೇವಸ್ಥಾನ ಕೆಡವಿ ಮಸೀದಿ ಕಟ್ಟಲಾಗಿದೆಯೋ ಅದನ್ನು ನೀವೆ ಕಿತ್ತು ಹಾಕಿ. ಇಲ್ಲವಾದರೆ ರಾಮಭಕ್ತರೆಲ್ಲರೂ ನಿಮ್ಮೆಲ್ಲಾ ಮಸೀದಿಗಳನ್ನು ಕಿತ್ತುಹಾಕುತ್ತಾರೆ. ಅಲ್ಲಿ ಮಂದಿರ ಕಟ್ಟೇ ಕಟ್ಟುತ್ತೇವೆ ಎಂದು ದೇಶದಲ್ಲಿ ಇರುವ ಮುಸಲ್ಮಾನರಿಗೆ ಹೇಳಲು ಇಷ್ಟ ಪಡುತ್ತೇನೆ ಎಂದು ಈಶ್ವರಪ್ಪ ಹೇಳಿದರು.